Site icon PowerTV

ಪ್ರೀತಿಸಿ ‘ಕೈ’ ಕೊಟ್ಟ ಲವರ್.. ಅಕ್ರಮ ಸಂಬಂಧ ಕಣ್ಣಾರೆ ಕಂಡು ಯುವಕ ಆತ್ಮಹತ್ಯೆಗೆ ಶರಣು

ಬೆಂಗಳೂರು : ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಕಣ್ಣಾರೆ ನೋಡಿದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅನ್ಬರಸನ್ ಸಾವನ್ನಪ್ಪಿರುವ ಯುವಕ. ವಿದ್ಯಾ ಎಂಬಾಕೆಯೇ ಪ್ರೀತಿ ಹೆಸರಲ್ಲಿ ವಂಚಿಸಿ ಕೈ ಕೊಟ್ಟ ಯುವತಿ. ಈ ಬಗ್ಗೆ ಮೃತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಅತ್ಮಹತ್ಯೆಗೆ ಯುವತಿಯೇ ಪ್ರಚೋದನೆ ನೀಡಿದ್ದಾಳೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ದಿವ್ಯಾಗೆ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿತ್ತು. ಬಳಿಕ ಆಕೆ ವಿಚ್ಚೇದನ ಪಡೆದಿದ್ದಳು. ವಿಚ್ಚೇದನ ಪಡೆದ ಸ್ವಲ್ಪ ದಿನದಲ್ಲೇ ಅನ್ಬರಾಸನ್ ಎಂಬ ಯುವಕನನ್ನು ಪ್ರೀತಿಸಲು ಆರಂಭಿಸಿದ್ದಳು. ಗಂಡ-ಹೆಂಡತಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆ ಪಡೆದು ಕಳೆದ ಆರು ತಿಂಗಳಿನಿಂದ ಲೀವ್​ ಇನ್ ರಿಲೇಷನ್​ನಲ್ಲಿದ್ದರು.

ಕರಿಮಣಿ ಮಾಲೀಕ ನೀ‘ನಲ್ಲ’ ಎಂದಳಾ?

ವಿದ್ಯಾಗೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಫ್ಲಿಪ್ಕಾರ್ಟ್ ನಲ್ಲಿ ಅನ್ಬರಸನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅನ್ಬರಸನ ಜೊತೆ ಸಹಜೀವನ ನಡೆಸುವ ಸಮಯದಲ್ಲಿ ಸಂತೋಷ ಎಂಬ ಯುವಕನ ಜೊತೆ ಈಕೆ ಅಕ್ರಮ ಸಂಬಂಧವನ್ನು ಈಕೆ ಹೊಂದಿದ್ದಳು. ಸಂತೋಷ ಹಾಗೂ ವಿದ್ಯಾ ಜೊತೆಯಲ್ಲಿರುವಾಗ ಕಣ್ಣಾರೆ ನೋಡಿದ ಅನ್ಬರಸನ ನೋವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ಪ್ರೇರೇಪಿಸಿದ್ದಾಳೆ ಎಂದು ದೂರು

ಎಷ್ಟು ಬಾರಿ ವಿದ್ಯೆಗೆ ಬುದ್ಧಿ ಹೇಳಿದರು ಸಹ ಆಕೆ ಕೇಳಿಲ್ಲ. ಜೊತೆಗೆ ಅವನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಪ್ರೀತಿ ಹೆಸರಿನಲ್ಲಿ ಹೀಗೆ ಮೋಸ ಮಾಡಿ ಒಬ್ಬ ವ್ಯಕ್ತಿಗೆ ಸಾವಿಗೆ ವಿದ್ಯಾ ಕಾರಣವಾಗಿದ್ದು, ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Exit mobile version