Site icon PowerTV

ನಾಯಿಗೆ ಸೀಮಂತ ಮಾಡಿದ ಮಾಲೀಕ

ಆನೇಕಲ್: ಮಾಲೀಕರೊಬ್ಬರು ಅವರ ನಾಯಿಗೆ ಸೀಮಂತ ಮಾಡಿ ಎಲ್ಲರ ಗಮನಸೆಳೆದಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಸಣ್ಣಪಲ್ಲಿ ಗ್ರಾಮ ಪಂಚಾಯಿತಿಯ ಕೂರಕ್ಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾರಾಯಣ ಎಂಬವರ ಮನೆಯಲ್ಲಿದ್ದ ನಾಯಿ ಗರ್ಭ ಧರಿಸಿದೆ. ಹಾಗಾಗಿ ತಮ್ಮ ನಾಯಿ ಮೊದಲ ಗರ್ಭ ಧರಿಸಿದೆ ಎಂದು ಸೀಮಂತ ಮಾಡಿದ್ದಾರೆ. ಸೀಮಂತದಲ್ಲಿ ನಾಯಿಗೆ ಹೊಸ ಬಟ್ಟೆ ಸಹ ಹಾಕಿಸಿದ್ದಾರೆ. ಬಳಿಕ ಹೊವು, ಹಣ್ಣು, ಅರಿಶಿನ-ಕುಂಕುಮ ಇಟ್ಟು ಪೂಜೆ ಕಾರ್ಯ ನೆರವೇರಿಸಿದ್ದಾರೆ. ಜೊತೆಗೆ ನಾಯಿಗೆ ಇಷ್ಟವಾಗುವ ಬಿರಿಯಾನಿ ಮತ್ತು ಬಿಸ್ಕತ್ತು ಇಟ್ಟು ಸೀಮಂತ ಮಾಡಿದ್ದಾರೆ.

ಗರ್ಭಾವಸ್ಥೆಯಲ್ಲಿದ್ದ ನಾಯಿಗೆ ನಾರಾಯಣ ಅವರು ಸೀಮಂತ ಮಾಡಿದ್ದು, ಸೀಮಂತಕ್ಕೆ ಗ್ರಾಮಸ್ಥರನ್ನು ಸಹ ಆಹ್ವಾನಿಸಲಾಗಿತ್ತು. ಸೀಮಂತಕ್ಕೆ ಬಂದ ಗ್ರಾಮಸ್ಥರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Exit mobile version