Site icon PowerTV

ಕಾಂಗ್ರೆಸ್ 40 ಸೀಟು ದಾಟುವುದಿಲ್ಲ : ಮೋದಿ ಭವಿಷ್ಯ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಧೂಳಿಪಟವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದರು.

ಕೇಂದ್ರ ಬಿಜೆಪಿ ಸರ್ಕಾರ ಅವಧಿಯ ಕೊನೆಯ ಅಧಿವೇಶನವನ್ನುದ್ದೇಶಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ವಿರುದ್ದ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ 40 ಸೀಟುಗಳನ್ನು ಗೆಲ್ಲುವುದಿಲ್ಲ ಎಂದು ಕುಟುಕಿದರು.

ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಶತ್ರುಗಳಿಗೆ ಭೂಮಿ ಕೊಟ್ಟಿದೆ. ಇವರ ಆಡಳಿತದಲ್ಲಿ ಒಬಿಸಿಗಳಿಗೆ ಮೀಸಲಾತಿಯೇ ನೀಡಲಿಲ್ಲ. ಇದೀಗ ಸ್ವತಃ ನೀತಿ ಇಲ್ಲದವರು ಮೋದಿಯವರ ಗ್ಯಾರಂಟಿಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ರಿಟಿಷರಿಂದ ಪ್ರೇರಿತರಾದವರು ಯಾರು..?

ಬ್ರಿಟಿಷರಿಂದ ಪ್ರೇರಿತರಾದವರು ಯಾರು..? ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಗುಲಾಮಗಿರಿಯ ಮನಸ್ಥಿತಿಯನ್ನು ಬೆಳೆಸಿದವರು ಯಾರು..? ನೀವು ಬ್ರಿಟಿಷರಿಂದ ಪ್ರಭಾವಿತರಾಗಿಲ್ಲದಿದ್ದರೆ, ಬ್ರಿಟಿಷರು ಮಾಡಿದ ದಂಡ ಸಂಹಿತೆಯನ್ನು ಏಕೆ ಬದಲಾಯಿಸಲಿಲ್ಲ..? ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದರು.

Exit mobile version