Site icon PowerTV

ಬೆಂಗಳೂರಿನಲ್ಲಿ ಮತ್ತೆ ಡಬಲ್ ಮರ್ಡರ್ : ಸ್ನೇಹಿತನ ಪ್ರಾಣ ಉಳಿಸಲು ಹೋಗಿ ಹೆಣವಾದ ವ್ಯಕ್ತಿ

ಬೆಂಗಳೂರು : ಕೆಲವು ತಿಂಗಳ ಹಿಂದೆಯೇ ಜೋಡಿ ಕೊಲೆಗೆ ಬೆಚ್ಚಿ ಬಿದ್ದ ರಾಜಧಾನಿ ಬೆಂಗಳೂರು ಇದೀಗ ಮತ್ತೊಂದು ಜೋಡಿ ಕೊಲೆಗೆ ಸಾಕ್ಷಿಯಾಗಿದೆ.

ಆಸ್ತಿ ವಿಚಾರಕ್ಕಾಗಿ ಇಬ್ಬರು ವ್ಯಾಪಾರಿಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹಲಸೂರ್ ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ ಪೇಟೆಯಲ್ಲಿ ನಡೆದಿದೆ.

ಸುರೇಶ್ (55) ಹಾಗೂ ಮಹೇಂದ್ರ (68) ಹತ್ಯೆಯಾದ ವ್ಯಾಪಾರಿಗಳು. ಶ್ರೀ ಹರಿ ಮಾರ್ಕೆಟಿಂಗ್ ನ ಕಚೇರಿಯಲ್ಲಿ ಕೊಲೆ ಮಾಡಲಾಗಿದೆ. ಹತ್ಯೆ ಮಾಡಿರುವ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಡಿಸಿಪಿ ಶೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ರಜೆ ಸಿಗುತ್ತೆ ಅಂತ 1ನೇ ಕ್ಲಾಸ್ ವಿದ್ಯಾರ್ಥಿಯನ್ನೇ ಕೊಂದ 8ನೇ ಕ್ಲಾಸ್ ವಿದ್ಯಾರ್ಥಿ 

ಇದೇ ಕೊಲೆಗೆ ಅಸಲಿ ಕಾರಣ

ಇಬ್ಬರನ್ನೂ ಕೊಲೆ ಮಾಡಿರುವ ಭದ್ರಾ ಸೀದಾ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನ ವಶಪಡೆದಿರುವ ಹಲಸೂರ್ ಗೇಟ್ ಪೊಲೀಸರು ತನಿಖೆ ನಡೆಸ್ತಿದ್ದಾರೆ. ‌ಆರೋಪಿ ಭದ್ರಾ ತನ್ನ ಪತ್ನಿ ವಿಚಾರದ ಬಗ್ಗೆಯೂ ಕೊಲೆ ಮಾಡಿದ್ದಾನೆ ಎನ್ನುವುದು ಮತ್ತೊಂದು ಅನುಮಾನ. ‌ಸದ್ಯ ಪೊಲೀಸರು ತನಿಖೆ ನಡೆಸ್ತಿದ್ದು, ತನಿಖೆ ನಂತರವೇ ಜೋಡಿ ಕೊಲೆಗೆ ಅಸಲಿ ಕಾರಣ ಬಯಲಾಗಲಿದೆ.

Exit mobile version