ಬೆಂಗಳೂರು : ಮರಿ ಟೈಗರ್ ವಿನೋದ್ ಪ್ರಭಾಕರ್ 25ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು, ಬಲರಾಮನಾಗಿ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ.
ಆ ದಿನಗಳು ಖ್ಯಾತಿಯ ಚೈತನ್ಯ ಬಲರಾಮ ಅಂಡರ್ವರ್ಲ್ಡ್ ಸ್ಟೋರಿಯನ್ನ ತೆರೆಗೆ ತರುತ್ತಿದ್ದು, ಚಿತ್ರಕ್ಕೆ ಬಲರಾಮನ ದಿನಗಳು ಎಂಬ ಹೆಸರನ್ನಿಡಲಾಗಿದೆ.
ಮರಿ ಟೈಗರ್ ವಿನೋದ್ ಪ್ರಭಾಕರ್ ಮತ್ತೊಂದು ರಗಡ್ ಸಿನಿಮಾ ಮೂಲಕ ಪ್ರೇಕ್ಷಕರೆದ್ರು ಬರೋದಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ 25ನೇ ಸಿನಿಮಾಗೆ ಸಜ್ಜಾಗಿರೋ ವಿನೋದ್ ಅದಕ್ಕಾಗಿ ಅಂಡರ್ವರ್ಲ್ಡ್ ಸಬ್ಜೆಕ್ಟ್ವೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಲರಾಮನಾಗಿ ವಿನೋದ್ ಮಿಂಚು
ಬೆಂಗಳೂರು ಭೂಗತ ಪಾತಕಿಗಳಾದ ಕೋತ್ವಾಲ್, ಜಯರಾಜ್ ಕಾಲದಲ್ಲೇ ಅಷ್ಟೇ ಕುಖ್ಯಾತನಾಗಿದ್ದ ರೌಡಿ ಬಲರಾಮನ ಸ್ಟೋರಿಯನ್ನ ತೆರೆಗೆ ಬರ್ತಾ ಇದ್ದು, ವಿನೋದ್ ಬಲರಾಮನಾಗಿ ಮಿಂಚಲಿದ್ದಾರೆ. ಚಿತ್ರಕ್ಕೆ ಬಲರಾಮನ ದಿನಗಳು ಅಂತ ಟೈಟಲ್ ಫಿಕ್ಸ್ ಆಗಿದ್ದು ಪದ್ಮಾವತಿ ಫಿಲಂಸ್ ಮೂಲಕ ಶ್ರೇಯಸ್ಮೊದಲ ಬಾರಿ ಚಿತ್ರವನ್ನ ನಿರ್ಮಾಣ ಮಾಡ್ತಾ ಇದ್ದಾರೆ.

ಸಚಿವ ಪರಮೇಶ್ವರ್ ಶುಭ ಹಾರೈಕೆ
ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಈ ಪದ್ಮಾವತಿ ಫಿಲಂಸ್ ಬ್ಯಾನರ್ ಮತ್ತು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ರು. ವಿಶೇಷ ಅಂದ್ರೆ ಈ ಹಿಂದೆ ಆ ದಿನಗಳು ಸಿನಿಮಾ ಮೂಲಕ ಜಯರಾಜ್-ಕೋತ್ವಾಲ್ ಕಾಲದ ರೌಡಿಸಂ ಕಥೆಯನ್ನ ಸೆನ್ಸಿಬಲ್ ಆಗಿ ತೆರೆಗೆ ತಂದಿದ್ದ ನಿರ್ದೇಶಕ ಕೆ.ಎಂ ಚೈತನ್ಯ ಈ ಚಿತ್ರವನ್ನ ಡೈರೆಕ್ಟ್ ಮಾಡ್ತಾ ಇದ್ದಾರೆ. ಜಸ್ಟ್ ಆ ಕಾಲದ ರೌಡಿಸಂ ಕಥೆ ಹೇಳೋದಷ್ಟೇ ಅಲ್ಲದೇ ಅಂದಿನ ರಾಜಕೀಯ, ಸಾಮಾಜಿಕ ಸ್ತೀತ್ಯಂತರಗಳ ಕಥೆ ಹೇಳೋದಕ್ಕೂ ರೆಡಿಯಾಗಿದ್ದಾರೆ.
ಸದ್ಯ ಟೈಟಲ್ ಲಾಂಚ್ ಮಾಡಿ ಸಖತ್ ಸೌಂಡ್ ಮಾಡಿರೋ ಬಲರಾಮ ಟೀಮ್ ಸದ್ಯದಲ್ಲೇ ದೊಡ್ಡ ಮಟ್ಟದ ತಯಾರಿಯೊಂದಿಗೆ ಚಿತ್ರೀಕರಣ ಶುರುಮಾಡಲಿದೆ. ಬಲರಾಮನ ದಿನಗಳು ಬಹುಬೇಗವೇ ಪ್ರೇಕ್ಷಕರೆದ್ರು ಬರಲಿವೆ.



Pinco giriş üçün link yeniləndi. Ən çox sevilən oyunlardan zövq al pinco onlayn kazino. Pinco ilə hər gün qazanmaq mümkündür.
Pinco oyunlarını dostlarla paylaş.