Site icon PowerTV

ಜನನ ಪ್ರಮಾಣ ಪತ್ರಕ್ಕೆ 1,000 ಲಂಚ ಪಡೆದ ಅಧಿಕಾರಿ ‘ಲೋಕಾ’ ಬಲೆಗೆ

ಶಿವಮೊಗ್ಗ : ಜನನ ಪ್ರಮಾಣ ಪತ್ರಕ್ಕೆ 1,000 ರೂ. ಲಂಚ ಚೇಬಿಗಿಳಿಸಿದ ಪಾಲಿಕೆ ಅಧಿಕಾರಿ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿಗೆ 1,000 ರೂ. ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯ ಎಫ್‍ಡಿಎ ನಾಗರಾಜ್ ಮತ್ತು ಜನನ ಮರಣದ ನೊಂದಣಾಧಿಕಾರಿ ಸುಪ್ರಿಯ ಅವರ ಮೇಲೆ ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿ, ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಗಿರೀಶ್ ಜೆ. ಎಂಬುವವರು 2 ದಿನಗಳ ಹಿಂದೆ ಜನನ ಪ್ರಮಾಣ ಪತ್ರದ ತಿದ್ದುಪಡಿಗೆ ಅರ್ಜಿ ಸಲ್ಲಿಸುವಾಗ ವಿಭಾಗದ ಎಫ್‍ಡಿಎ ನಾಗರಾಜ್ ಅವರು 2 ಪ್ರತಿ ನೀಡಲು 1,000 ನೀಡುವಂತೆ ಸೂಚಿಸಿದ್ದಾರೆ. ಅವರಿಗೆ 1,000 ರೂ. ನೀಡುವುದನ್ನು ಮತ್ತು ಅವರು ಆಡಿದ ಮಾತುಗಳನ್ನು ದೂರುದಾರ ಗಿರೀಶ್ ಅವರು ಮೊಬೈಲ್‍ನಲ್ಲಿ ದಾಖಲಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಡಿವೈಎಸ್​ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ಪಾಲಿಕೆಯ ಜನನ ಮರಣ ವಿಭಾಗಕ್ಕೆ ಭೇಟಿ ನೀಡಿ ನಾಗರಾಜ್ ಮತ್ತು ಸುಪ್ರಿಯ ಅವರನ್ನು ವಿಚಾರಣೆಗೆ ಒಳಪಡಿಸಿದರು. ದಾಖಲೆಗಳನ್ನು ಪರಿಶೀಲಿಸಿದರು.

Exit mobile version