Site icon PowerTV

ಕಾರ್ಯಕರ್ತನಿಗೆ ನಾಯಿ ಬಿಸ್ಕತ್ ನೀಡಿದ ರಾಹುಲ್ ಗಾಂಧಿ

ಬೆಂಗಳೂರು : ನಾಯಿ ತಿನ್ನದ ಬಿಸ್ಕತ್ತನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಕಾರ್ಯಕರ್ತನಿಗೆ ನೀಡಿರುವ ವೀಡಿಯೋ ಸಮಾಜಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.

ಭಾರತ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಿಗೆ ಬಿಸ್ಕತ್ತನ್ನು ನೀಡಿದ್ದಾರೆ. ಆದರೆ, ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಅವರನ್ನು ಮಾತನಾಡಿಸಲು ಪಕ್ಷದ ಕಾರ್ಯಕರ್ತರು ಬಂದಿದ್ದಾರೆ. ಆಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ.

ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್ ಕಾರ್ಯಕರ್ತನಿಗೆ ಕೊಟ್ಟ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ನಾಯಿಗೆ ಬಿಸ್ಕತ್ ತಿನ್ನಿಸುವ, ಸೆಲ್ಫಿ ತೆಗೆಯುವ ವಿಡಿಯೋ ಇದೆ.

Exit mobile version