Site icon PowerTV

ಕೃಷ್ಣ ನದಿಯಲ್ಲಿ ವಿಷ್ಣುವಿನ ಹಳೆಯ ಮೂರ್ತಿಗಳು, ಶಿವಲಿಂಗ ಪತ್ತೆ

ರಾಯಚೂರು: ಕೃಷ್ಣ ನದಿಯಲ್ಲಿ ವಿಷ್ಣುವಿನ ಹಳೆಯ ಮೂರ್ತಿಗಳು, ಶಿವಲಿಂಗ ಪತ್ತೆಯಾಗಿರುವ ಘಟನೆ ನಡೆದಿದೆ. 

ಹೌದು, ಕೃಷ್ಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದ್ದು, ರವಿವಾರ ಸಂಜೆ ನದಿಯಲ್ಲಿ ವಿಷ್ಣುವಿನ ಹಳೇ ಮೂರ್ತಿಗಳು ಪತ್ತೆಯಾಗಿದೆ. ಶಂಖ ಚಕ್ರ ಹಿಡಿದಿರುವ ಮೂರ್ತಿ ಇದಾಗಿದ್ದು ಸುತ್ತಲೂ ದಶಾವತಾರಗಳನ್ನು ಕೆತ್ತನೆ ಮಾಡಲಾಗಿದೆ.

ಅದರ ಜತೆಗೆ ಇನ್ನೊಂದು ಶಿಲಾ ಮೂರ್ತಿ ಹಾಗೂ ಶಿವಲಿಂಗ ಕೂಡ ಪತ್ತೆಯಾಗಿವೆ. ಬಹುಶಃ ಮೂರ್ತಿ ಮುಕ್ಕಾಗಿರುವ ಕಾರಣಕ್ಕೆ ನದಿಗೆ ಹಾಕಿರಬಹುದು ಅಂದಾಜಿಸಲಾಗಿದೆ. ಸದ್ಯಕ್ಕೆ ಮೂರ್ತಿಗಳನ್ನು ನದಿ ಪಾತ್ರದಲ್ಲಿರಿಸಿ ಸ್ಥಳೀಯರು, ಸಿಬ್ಬಂದಿ ಪೂಜೆ ಮಾಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Exit mobile version