Site icon PowerTV

ಹೃತಿಕ್-ದೀಪಿಕಾ ಕಿಸ್ : ‘ಫೈಟರ್’ ಸಿನಿಮಾ ವಿರುದ್ಧ ದೂರು ದಾಖಲು

ಬೆಂಗಳೂರು : ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಸಿನಿಮಾ ಜನವರಿ 25ರಂದು ಬಿಡುಗಡೆ ಆಗಿ 175.25 ಕೋಟಿ ಕಲೆಕ್ಷನ್ ಮಾಡಿದೆ.

ಆದರೆ, ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿಲ್ಲ. ಇದಕ್ಕೆ ಕೆಲವು ಕಾರಣಗಳನ್ನು ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಹೇಳಿದ್ದಾರೆ. ಇನ್ನು ‘ಫೈಟರ್’ ಸಿನಿಮಾ ಗಲ್ಫ್​ ರಾಷ್ಟ್ರಗಳಲ್ಲಿ ನಿಷೇಧಕ್ಕೆ ಒಳಗಾಗಿದೆ.

ಇದೆಲ್ಲದರ ನಡುವೆ ಇದೀಗ ಈ ಸಿನಿಮಾಕ್ಕೆ ಕಾನೂನು ಸಮಸ್ಯೆ ಎದುರಾಗಿದೆ. ಭಾರತೀಯ ವಾಯುಸೇನೆ ಕುರಿತಾದ ಈ ಸಿನಿಮಾದ ವಿರುದ್ಧ ವಾಯುಸೇನೆಯ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ‘ಫೈಟರ್’ ಸಿನಿಮಾನಲ್ಲಿ ನಾಯಕ ಹೃತಿಕ್ ರೋಷನ್ ಹಾಗೂ ನಾಯಕಿ ದೀಪಿಕಾ ಪಡುಕೋಣೆ ನಡುವೆ ಕೆಲವು ಹಸಿ-ಬಿಸಿ ದೃಶ್ಯಗಳಿವೆ.

ಹೃತಿಕ್-ದೀಪಿಕಾ ಚುಂಬನ ದೃಶ್ಯ

ಬೀಚ್​ನಲ್ಲಿ ಚಿತ್ರೀಕರಿಸಲಾಗಿರುವ ಒಂದು ಹಾಡಂತೂ ಸಖತ್ ಹಾಟ್ ಆಗಿದೆ. ಹೃತಿಕ್ ಹಾಗೂ ದೀಪಿಕಾ ನಡುವೆ ಕೆಲವು ಚುಂಬನ ದೃಶ್ಯಗಳು ಸಹ ಇವೆ. ಒಂದು ದೃಶ್ಯದಲ್ಲಿ ಹೃತಿಕ್ ಹಾಗೂ ದೀಪಿಕಾ ಪಡುಕೋಣೆ ವಾಯುಸೇನೆಯ ಸಮವಸ್ತ್ರ ಧರಿಸಿಕೊಂಡು ಪರಸ್ಪರ ಚುಂಬಿಸುತ್ತಾರೆ. ಈ ದೃಶ್ಯದ ಬಗ್ಗೆ ವಾಯುಪಡೆಯ ವಿಂಗ್ ಕಮಾಂಡರ್ ಸೌಮ್ಯದೀಪ್ ದಾಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಸಿನಿಮಾದ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

Exit mobile version