Site icon PowerTV

ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್ : ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ದಾಳಿ

ಬೆಳಗಾವಿ : ಬ್ಯಾಂಕಿನಲ್ಲಿ ಸಾಲ ಪಡೆದು ಮರಪಾವತಿ ಮಾಡದ ಹಿನ್ನೆಲೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಬಳಿ ಇರುವ ಕಾರ್ಖಾನೆಗೆ ಸಿಐಡಿ ತೆರಳಿ ದಾಖಲೆ ಪರಿಶೀಲಿಸಿದ್ದಾರೆ.

ಸೌಭಾಗ್ಯಲಕ್ಷ್ಮೀ ಶುಗರ್ ಲಿಮಿಟೆಡ್ ಕಾರ್ಖಾನೆ ಹೆಸರಿನಲ್ಲಿ ಅಲ್ಲಿನ ರಾಜ್ಯ ಸಹಕಾರಿ ಅಪೆಕ್ಸ್​ ಬ್ಯಾಂಕ್​ನಲ್ಲಿ 439 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲ ಪಾವತಿಸದೇ ಮೋಸ ಮಾಡುವ ಉದ್ದೇಶವನ್ನು ಕಂಡು ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಮುತ್ತಶೆಟ್ಟಿ ಬೆಂಗಳೂರು ವಿವಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸೆಕ್ಷನ್ 406, 420 ಅನ್ವಯ ದೂರು

ಜನವರಿ 5ರಂದು ದೂರು ಸೆಕ್ಷನ್ 406, 420 ಅನ್ವಯ ದೂರು ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣ ತನಿಖೆಗೆ ಸಿಐಡಿಗೆ ವಹಿಸಿತ್ತು. ನಾಲ್ಕು ವಾಹನಗಳಲ್ಲಿ ಬಂದ ಸಿಐಡಿ ಅಧಿಕಾರಿಗಳ ಇಂದು ಕಾರ್ಖಾನೆ ಮೇಲೆ ದಾಳಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಸದ್ಯ ರಮೇಶ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಸಕ್ಕರೆ ಕಾರ್ಖಾನೆ ನೋಡಿಕೊಳ್ಳುತ್ತಿದ್ದಾರೆ.

Exit mobile version