Site icon PowerTV

ಶಂಕರ್ ಮಹದೇವನ್, ಜಾಕಿರ್ ಹುಸೇನ್​ಗೆ ಗ್ರ್ಯಾಮಿ ಪ್ರಶಸ್ತಿ : ಪ್ರಧಾನಿ ಮೋದಿ ಅಭಿನಂದನೆ

ಬೆಂಗಳೂರು : ಲಾಸ್ ಏಂಜಲೀಸ್​ನಲ್ಲಿ ನಡೆದ 66ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಗಾಯಕ ಶಂಕರ್ ಮಹಾದೇವನ್ ಹಾಗೂ ಜಾಕಿರ್ ಹುಸೇನ್​ ಅವರ ‘ಶಕ್ತಿ’ ಬ್ಯಾಂಡ್ ಈ ಬಾರಿ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಜಾನ್ ಮೆಕ್ಲಾಫಿನ್ (ಗಿಟಾರ್), ಜಾಕಿರ್ ಹುಸೇನ್(ತಬಲಾ) ಶಂಕರ್ ಮಹಾದೇವನ್(ಗಾಯಕ), ವಿ. ಸೆಲ್ವಗಣೇಶ್(ತಾಳವಾದ್ಯ), ಗಣೇಶ್ ರಾಜಗೋಪಾಲ್(ಪಿಟೀಲು) ‘ಶಕ್ತಿ’ ಬ್ಯಾಂಡ್​ ಹಾಡನ್ನು ಸಂಯೋಜಿಸಿದ್ದಾರೆ.

ಇದೇ ಸಮಾರಂಭದಲ್ಲಿ ಭಾರತದ ಸುಪ್ರಸಿದ್ದ ಕೊಳಲು ವಾದಕ ರಾಕೇಶ್ ಚೌರಾಸಿಯಾ, ಎರಡು ಪ್ರಶಸ್ತಿ ಗೆದ್ದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭ ಇದಾಗಿದೆ.

ಪ್ರಧಾನಿ ಮೋದಿ ಅಭಿನಂದನೆ

ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾದ ಕಲಾವಿದರಾದ ಜಾಕಿರ್ ಹುಸೇನ್, ರಾಕೇಶ್ ಚೌರಾಸಿಯಾ, ಶಂಕರ್ ಮಹಾದೇವನ್, ಸೆಲ್ವಗನೇಶ್ ಹಾಗೂ ಗಣೇಶ್ ರಾಜಗೋಪಾಲನ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

‘ನಿಮ್ಮ ಅಸಾಧಾರಣ ಪ್ರತಿಭೆ ಮತ್ತು ಸಂಗೀತಕ್ಕೆ ನೀವು ನೀಡಿದ ಸಮರ್ಪಣೆ ವಿಶ್ವದಾದ್ಯಂತ ಇರುವ ಹೃದಯಗಳನ್ನು ಗೆದ್ದಿದೆ. ಈ ಸಾಧನೆಗೆ ಇಡೀ ದೇಶ ಹೆಮ್ಮೆಪಡುತ್ತಿದೆ. ಕಠಿಣ ಪರಿಶ್ರಮಕ್ಕೆ ಇದೇ ಸಾಕ್ಷೆ’ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

Exit mobile version