Site icon PowerTV

ಘಾಟಿ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ: 55 ಲಕ್ಷಕ್ಕು ಅಧಿಕ ಹಣ ಸಂಗ್ರಹ!

ದೊಡ್ಡಬಳ್ಳಾಪುರ : ಪ್ರಸಿದ್ದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ (ಫೆ.5) ಸೋಮವಾರ ದೇವಾಲಯದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು, ಎಣಿಕೆಯಲ್ಲಿ ಒಟ್ಟು 55 ಲಕ್ಷಕ್ಕು ಅಧಿಕ ಹಣ ಸಂಗ್ರಹವಾಗಿದೆ.

ದೇವಾಲಯದ ಆವರಣದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು 55, 24,663ರೂ. ಮೊತ್ತ ಸಂಗ್ರಹವಾಗಿದೆ. ಇದರೊಂದಿಗೆ 6,900 ರೂ ಮೌಲ್ಯದ 01 ಕೆಜಿ 390 ಗ್ರಾಂ ಬೆಳ್ಳಿ, 21,750 ರೂ ಮೌಲ್ಯದ 04 ಗ್ರಾಂ 600 ಮಿಲಿ ತೂಕದ ಚಿನ್ನ ಸಂಗ್ರಹವಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡಗೆ ಅಪಘಾತ: ಆಸ್ಪತ್ರೆಗೆ ದಾಖಲು

ಮುಜರಾಯಿ ಇಲಾಖೆಯ ನಿಯಮಗಳಂತೆ ನಡೆದ ಹುಂಡಿ ಎಣಿಕೆ ಕಾರ್ಯಕ್ರಮದಲ್ಲಿ ಭಕ್ತರಿಂದಲೇ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಮುಜರಾಯಿ ಇಲಾಖೆ ತಹಶೀಲ್ದಾರ್ ಜೆ.ಜೆ.ಹೇಮಾವತಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ಸಿಬ್ಬಂದಿ ನಂಜಪ್ಪ ಸೇರಿದಂತೆ ಇತರರು ಇದ್ದರು.

Exit mobile version