Site icon PowerTV

ಈ ನಗರದಲ್ಲಿ ಗೋಬಿ ಮಂಚೂರಿ ಬ್ಯಾನ್ : ಎಲ್ಲಿ? ಯಾಕೆ?

ಬೆಂಗಳೂರು : ಗೋಬಿ ಮಂಚೂರಿ (ಗೋಬಿ ಮಂಚೂರಿಯನ್) ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಇದು ಬಹುತೇಕರಿಗೆ ಅಚ್ಚುಮೆಚ್ಚು. ಆದರೆ, ಗೋಬಿ ಪ್ರಿಯರಿಗೆ ಗೋವಾ ಬಿಗ್ ಶಾಕ್ ನೀಡಿದೆ.

ಗೋವಾದ ನಗರವೊಂದು ಗೋಬಿ ಮಂಚೂರಿ ಖಾದ್ಯವನ್ನು ಬ್ಯಾನ್ ಮಾಡಿದೆ. ಗೋಬಿ ಮಂಚೂರಿಯನ್ನು ಮಳಿಗೆಗಳಲ್ಲಿ ಮತ್ತು ಹಬ್ಬಗಳಲ್ಲಿ ನಿಷೇಧಿಸುವಂತೆ ಆದೇಶ ಹೊರಡಿಸಲಾಗಿದೆ.

ಸಿಂಥೆಟಿಕ್ ಬಣ್ಣಗಳ ಬಳಕೆ, ಶುಚಿತ್ವವಿಲ್ಲದ ತಯಾರಿಕೆ ಮತ್ತು ಆರೋಗ್ಯದ ಅಪಾಯಗಳಿಂದ ಗೋವಾದ ಮಪುಸಾ ಮುನ್ಸಿಪಲ್ ಕೌನ್ಸಿಲ್ ಗೋಬಿ ಮಂಚೂರಿಯನ್ನು ನಿಷೇಧಿಸಿದೆ. 2022ರಲ್ಲಿ ಮೊರ್ಮುಗಾವ್​ ಮುನ್ಸಿಪಲ್ ಕೌನ್ಸಿಲ್ ಕೂಡ ಗೋಬಿ ಮಂಚೂರಿ ಮೇಲೆ ನಿಷೇಧ ಹೇರಿತ್ತು.

ಸಾಮಾನ್ಯವಾಗಿ ಗೋಬಿ ಮಂಚೂರಿಯನ್ನು ಹೂಕೋಸು ಹಾಕಿ ಮಾಡಲಾಗುತ್ತದೆ. ಡೀಪ್ ಫ್ರೈ ಮಾಡಿ ಕೆಂಪು ಸಾಸ್ ಹಾಕಿ ಗ್ರಾಹಕರಿಗೆ ನೀಡಲಾಗುತ್ತದೆ. ಆಹಾರ ಪ್ರಿಯರಿಗೆ ಈ ಖಾದ್ಯ ಪಂಚಪ್ರಾಣವೇ ಸರಿ. ಆದರೀಗ ಗೋಬಿ ಮಂಚೂರಿ ಬ್ಯಾನ್ ಆದೇಶ ಆಹಾರ ಪ್ರಿಯರಿಗೆ ಶಾಕ್ ನೀಡಿದೆ.

Exit mobile version