Site icon PowerTV

ಪಶು ಇಲಾಖೆ ಸಚಿವ ವೆಂಕಟೇಶ್​ರನ್ನ ಕೂಡಲೇ ಬದಲಾಯಿಸಿ : ಕಾರಣ ಕೊಟ್ಟ ಪ್ರಭು ಚೌಹಾಣ್

ಬೀದರ್ : ಪಶು ಸಂಗೋಪನಾ ಇಲಾಖೆ ಕುರಿತಾಗಿ ಹಾಲಿ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರಿಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ಅವರನ್ನ ಕೂಡಲೇ ಬದಲಾಯಿಸಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚೌಹಾಣ್ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿ ಪಶು ಸಂಗೋಪನಾ ಸಚಿವರು ಈವರೆಗೆ ಒಂದೇ ಒಂದು ಮೀಟಿಂಗ್ ಮಾಡಿಲ್ಲ. ಅವರಿಗೆ ಇಲಾಖೆ ಕುರಿತು ಯಾವುದೇ ಮಾಹಿತಿ‌ ಇಲ್ಲ ಎಂದು ಕುಟುಕಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಮಾತೆ ರಕ್ಷಣೆಗಾಗಿ ಮಾಡಲಾಗಿದ್ದ ಎಲ್ಲ ಯೋಜನೆಗಳನ್ನ ಕಾಂಗ್ರೆಸ್ ಸರ್ಕಾರ ಬಂದ್ ಮಾಡುತ್ತಿದ್ದಾರೆ. ಗೋಮಾತೆ ರಕ್ಷಣೆಗಾಗಿ ಗೋ ಹತ್ಯಾ ಕಾನೂನು ತಂದಿದ್ದೆವು. ಆದ್ರೆ, ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆ ಯಾವುದೇ ಗಮನ ಹರಿಸುತ್ತಿಲ್ಲ. ಎಲ್ಲಾ ಕಡೆ ಹಸುಗಳ ಹತ್ಯೆ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಗೋವುಗಳ ಜೊತೆ ಪ್ರತಿಭಟನೆ ಮಾಡುತ್ತೇವೆ

ರೈತರ ಏಳಿಗೆಗೆ ಪ್ರಾಣಿ ಸಹಾಯ ಕೇಂದ್ರ ಆರಂಭ ಮಾಡಿದ್ದೆವು. ಪುಣ್ಯಕೋಟಿ ದತ್ತು ಯೋಜನೆ ಹಾಗೂ ಗೋಶಾಲೆ, ಪಶು ಸಂಜೀವಿನಿ 1962 ಸಹಾಯವಾಣಿ ಆರಂಭ ಮಾಡಿದ್ದೆವು. ಆದ್ರೆ, ಕಾಂಗ್ರೆಸ್‌ನವರು ಎಲ್ಲವನ್ನು ಬಂದ್ ಮಾಡಿದ್ದಾರೆ. ಗೋ ಮಾತೆ ಸಂಬಂಧಿತ ಎಲ್ಲಾ ಯೋಜನೆಗಳನ್ನ ಮತ್ತೆ ಆರಂಭಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಗೋವುಗಳ ಜೊತೆ ಪ್ರತಿಭಟನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

Exit mobile version