Site icon PowerTV

ಪೂನಂ ಪರ ನಿಂತ ರಾಮ್ ಗೋಪಾಲ್ ವರ್ಮಾ!

ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾವಿನ ನಾಟಕವಾಡಿದ ನಟಿ ಪೂನಂ ಪಾಂಡ ವಿರುದ್ಧ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಸೇರಿದಂತೆ ಹಲವರು ಕಿಡಿಕಾರಿದ್ದಾರೆ. ಆದರೆ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಪೂನಂ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ರಾಮಾಯಣ ಧಾರಾವಾಹಿ ಮತ್ತೆ ಪ್ರಸಾರ!

ಪೂನಂ ಸಾವಿನ ನಾಟಕದ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ರಾಮ್ ಗೋಪಾಲ್ ವರ್ಮಾ, ನಿನ್ನ ಆತ್ಮ ನಿನ್ನಷ್ಟೇ ಸುಂದರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ನೀನು ತೆಗೆದುಕೊಂಡ ದಾರಿಯ ಬಗ್ಗೆ ಕೆಲವರಿಂದ ಟೀಕೆ ವ್ಯಕ್ತವಾಗಿರಬಹುದು. ಆದರೆ ಸಾವಿನ ನಾಟಕದಿಂದ ನೀನು ಸಾಧಿಸಿರುವುದೇನು? ಅದರ ಹಿಂದಿರುವ ನಿನ್ನ ಉದ್ದೇಶವೇನು? ಎಂದು ಯಾರು ಪ್ರಶ್ನಿಸುವುದಿಲ್ಲ. ಗರ್ಭಕಂಠದ ಕ್ಯಾನ್ಸರ್ ಕುರಿತಾದ ಚರ್ಚೆ ಇದೀಗ ಟ್ರೆಂಡ್ ಆಗುತ್ತಿದೆ. ನಿನ್ನ ಆತ್ಮ ನಿನ್ನಷ್ಟೇ ಸುಂದರ. ನಿನಗೆ ಒಳಿತನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

Exit mobile version