Site icon PowerTV

ಜಾತಿ ಕಾರಣಕ್ಕೆ ದೇಗುಲದ ಗರ್ಭಗುಡಿಗೆ ಬಿಟ್ಟಿರಲಿಲ್ಲ:ಕನಕ ಪೀಠ ಶ್ರೀ

ಚಿತ್ರದುರ್ಗ: ಬಾಗೂರು ಗ್ರಾಮದ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿದಾಗ ಜಾತಿ ಕಾರಣಕ್ಕೆ ತಮಗೆ ದೇವಾಲಯದ ಗರ್ಭಗುಡಿಯ ಒಳಗೆ ಬಿಟ್ಟಿರಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಶ್ರೀಗಳು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ HDK ಹೆಸರೇಳಿಕೊಂಡು ಡ್ರೋನ್​ ಪ್ರತಾಪ್ ವಂಚನೆ: ದೂರು ದಾಖಲು

ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿ ಗ್ರಾಮದಲ್ಲಿ ನಡೆದ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ʻಪರಿವರ್ತನೆಯ ಹಾದಿಯಲ್ಲಿ ಮಠಗಳುʼ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಬಾಗೂರು ಗ್ರಾಮದ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿದಾಗ ನಮ್ಮನ್ನ ದೇವಸ್ಥಾನದ ಗರ್ಭಗುಡಿಗೆ ಬಿಟ್ಟಿರಲಿಲ್ಲ. ನಾವು ದೇಗುಲಕ್ಕೆ ಹೋಗಿ ಬಂದ ಮೇಲೆ ಕುರುಬರ ಸ್ವಾಮೀಜಿ ಒಳಗೆ ಬಂದರೆಂದು ದೇಗುಲವನ್ನೇ ಸ್ವಚ್ಛಗೊಳಿಸಿದ್ದರು. ಇದರಿಂದ ಅಲ್ಲಿನವರು ನಾವು ಹೋಗಿದ್ದಕ್ಕೆ ಸ್ವಚ್ಛವಾಯಿತು ಎಂದು ವ್ಯಂಗ್ಯವಾಡಿದ್ದರು.

ಹಾಗಾಗಿ ನಾವು ಚನ್ನಕೇಶವ ದೇಗುಲಕ್ಕೆ ಮತ್ತೆ ಹೋಗಲ್ಲ ಎಂದು ನಿರ್ಧಾರ ತೆಗೆದುಕೊಂಡೆವು ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.

Exit mobile version