Saturday, August 23, 2025
Google search engine
HomeUncategorizedಜೀವಂತವಾಗಿರುವಾಲೇ ಈ ಮೂರು ಅದ್ಭುತಗಳನ್ನು ನೋಡುತ್ತೇನೆ ಅಂದುಕೊಂಡಿರಲಿಲ್ಲ:ಈಶ್ವರಪ್ಪ

ಜೀವಂತವಾಗಿರುವಾಲೇ ಈ ಮೂರು ಅದ್ಭುತಗಳನ್ನು ನೋಡುತ್ತೇನೆ ಅಂದುಕೊಂಡಿರಲಿಲ್ಲ:ಈಶ್ವರಪ್ಪ

ಶಿವಮೊಗ್ಗ: ನನ್ನ ಜೀವನಲ್ಲಿ ಮೂರು ಸಂತೋಷದ ದಿನಗಳನ್ನು ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಅದರಲ್ಲಿ ಎಲ್​.ಕೆ ಅಡ್ವಾನಿಯವರಿಗೆ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿರುವುದು ಕೂಡ ಅದರಲ್ಲಿ ಒಂದು ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಮಾದ್ಯಮದ ಜೊತೆ ಮಾತನಾಡಿದ ಅವರು, ಭಾರತದ ಮಾಜಿ ಉಪಪ್ರಧಾನಿ ಎಲ್​.ಕೆ ಅಡ್ವಾನಿಯವರಿಗೆ ಭಾರತ ಸರ್ಕಾರವು ಭಾರತ ರತ್ನ ನೀಡಿರುವುದು ಸಂಸತದ ಸಂಗತಿ, ರಥಯಾತ್ರೆ ಮಾಡುವಾಗ ನಾನು ಅಡ್ವಾಣಿಯವರ ಜೊತೆಯಲ್ಲಿ ಭಾಗವಹಿಸಿದ್ದೆ ಎಂದರು.

ಇದನ್ನೂ ಓದಿ: ಹಿರಿಯ ರಾಜಕಾರಣಿ ಎಲ್​.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಸರ್ಕಾರ!

ನನ್ನ ಜೀವನದಲ್ಲಿ ಮೂರು ಸಂತೋಷದ ದಿನಗಳು ಬರುತ್ತೆ ಅಂದುಕೊಂಡಿರಲಿಲ್ಲ. ಜೀವಂತವಾಗಿ ಇರುವಾಗಲೇ ರಾಮ ಮಂದಿರ ನನಸಾಗುತ್ತೆ ಅಂದುಕೊಂಡಿರಲಿಲ್ಲ ಅದು ನನಸಾಯಿತು. ಕಾಶಿ ವಿಶ್ವನಾಥನ ಜ್ಞಾನವ್ಯಾಪಿ ಜಾಗದಲ್ಲಿ ಪೂಜೆ ಆಗುವುದನ್ನು ಕಣ್ಣಿನಿಂದ ನೋಡಿ ಆನಂದ ಆಯ್ತು. ಇಡೀ ದೇಶದ ಕಾರ್ಯಕರ್ತರನ್ನ ಸಂಘಟನೆಗೆ ತೊಡಗಿಸಿದವರು ರಾಜಕೀಯ ಭೀಷ್ಮ ಅಡ್ವಾನಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದು ನೋಡುತ್ತಿರುವುದು ಆನಂದ ತಂದಿದೆ ಎಂದರು.

 

ಎಂಎಲ್ಎ, ಎಂಪಿ ಸಿಗಲಿಲ್ಲ ಅಂತ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ವ್ಯಾಮೋಹಿಗಳನ್ನು ನೋಡುತ್ತೇವೆ. ಅಂತದರಲ್ಲಿ ಅಧಿಕಾರ ಬಯಸದೇ ಅಟಲ್ ಜೀ ಪ್ರಧಾನಿ ಆಗುತ್ತಾರೆ ಅಂತ ಘೋಷಣೆ ಮಾಡಿದ್ದರು, ಪ್ರತಿಯೊಬ್ಬ ಕಾರ್ಯಕರ್ತರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು. ನಾನು ಅವರ ಮನೆಗೆ ಹೋದಾಗ ಅಣ್ಣಾನೋ ತಮ್ಮ ಬಂದಿದ್ದಾನೆ ಅಂತಾ ನಮ್ಮನ್ನ ನೋಡಿದ್ದರು, ವಿಶ್ವ ನಾಯಕರಲ್ಲಿ ವಿಶ್ವನಾಯಕ ಅಡ್ವಾಣಿ ಅವರು ಅವರಿಗೆ ಭಾರತ ರತ್ನ ಸಿಕ್ಕಿರೋದು ನಮಗೆಲ್ಲ ಆನಂದ ತಂದಿದೆ ಎಂದು ಅಡ್ವಾಣಿಯವರನ್ನು ಹಾಡಿ ಹೊಗಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments