Site icon PowerTV

ಮಾದಪ್ಪನ ಹುಂಡಿ ಎಣಿಕೆಯಲ್ಲಿ 2 ಕೋಟಿಗೂ ಹೆಚ್ಚು ಬೃಹತ್​​​ ಮೊತ್ತ ಸಂಗ್ರಹ!

ಚಾಮರಾಜನಗರ: ಜಿಲ್ಲೆಯ ಮಲೈಮಹದೇಶ್ವರ ಬೆಟ್ಟದಲ್ಲಿ‌ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಒಂದು ತಿಂಗಳಿಗೆ ಹುಂಡಿ ಎಣಿಕೆಯಲ್ಲಿ 2.16 ಕೋಟಿ ರೂ. ಸಂಗ್ರಹವಾಗಿದೆ.

ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 2,ಕೋಟಿಗೂ ಹೆಚ್ಚು ಹಣ‌ ಹಾಗೂ 78ಗ್ರಾಂ ಚಿನ್ನ, 2.ಕೆಜಿ 350 ಗ್ರಾಮ್ ಬೆಳ್ಳಿ ಸಂಗ್ರಹವಾಗಿದೆ. ಅಲ್ಲದೆ ಯುಎಸ್​​​ನ 4 ಡಾಲರ್, ಅಫ್ಘಾನಿಸ್ತಾನದ 10 ಡಾಲರ್​​, ಮಲೆಶಿಯಾದ 1 ರಿಂಗಿಟ್, ನೇಪಾಳದ ಮೂರು ನೋಟುಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: ಹಿರಿಯ ರಾಜಕಾರಣಿ ಎಲ್​.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಸರ್ಕಾರ!

ಅಲ್ಲದೆ ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖ ಬೆಲೆಯ 12 ನೋಟುಗಳು ಸಹ ಪತ್ತೆಯಾಗಿವೆ. ಉಚಿತ ಪ್ರಯಾಣ ಹಾಗೂ ಸಂಕ್ರಾತಿ ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರ ಮಾದಪ್ಪ ದರ್ಶನಕ್ಕೆ ಹರಿದು ಬಂದಿದ್ದು, ಹರಕೆಯ ರೂಪದಲ್ಲಿ ಬೃಹತ್​​​​​​ ಮೊತ್ತ ಹುಂಡಿಗಳ ಎಣಿಕೆಯಲ್ಲಿ ಪತ್ತೆಯಾಗಿದೆ.

Exit mobile version