ಟಿಪ್ಪರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವು!

ಹೊಸಕೋಟೆ: ಚಾಲಕನ ಅಜಾಗರೂಕತೆಯಿಂದ ಮಹಿಳೆ ಮೇಲೆ ಟಿಪ್ಪರ್​ ಲಾರಿ ಹರಿದ ಪರಿಣಾಮ ಮಹಿಳೆ ದೇಹ ನಜ್ಜು ಗುಜ್ಜಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೋತುಕದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಜುಳ (39) ಮೃತ ಮಹಿಳೆ,  ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಮೋತುಕದಹಳ್ಳಿಯ ವಿಶ್ವವಿನಾಯಕ ಸ್ಟೋನ್​ ಕ್ರಷರ್​ ನಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ಈಕೆ, ಎಂದಿನಂತೆ ನೆನ್ನೆಯೂ ಕಸಗುಡಿಸುವ ವೇಳೆ ಅದೇ ಸ್ಟೋನ್​ ಕ್ರಷರ್​ ಗೆ ಸಂಬಂಧಿಸಿದ ಟಿಪ್ಪರ್​ ಲಾರಿಯು ಮೇಲೆ ಹರಿದ ಪರಿಣಾಮ ಮಹಿಳೆ ದೇಹ ನಜ್ಜುಗುಜ್ಜಾಗಿದೆ, ಘಟನೆಗೆ ಟಿಪ್ಪರ್ ಲಾರಿಯ ಚಾಲಕನ ಅಜಾಗರೂಕತೆಯೆ ಕಾರಣ ಎಂದು ಹೆಳಲಾಗುತ್ತಿದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ : ಬಿಯರ್ ಬೆಲೆ ಮತ್ತೆ ಏರಿಕೆ

ಘಟನೆ ಸಂಬಂಧ ಸ್ಟೋನ್ ಕ್ರಷರ್​ ಮಾಲೀಕ ಚಿಕ್ಕರೇವಣ್ಣ, ಮ್ಯಾನೇಜರ್​ ವೇಣು ಮತ್ತು ಚಾಲಕವ ವಿರುದ್ದ ನಂದಗುಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES