ಬೆಂಗಳೂರು : ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಪೂರೈಸಿದರು. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು.
ವಿಶಾಖಪಟ್ಟಣಂ ವೈಜಾಗ್ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಮಾಡುತ್ತಿದೆ. ಆದರೆ, ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದುಕೊಂಡಿದೆ.
ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಆಸರೆಯಾಗಿದ್ದಾರೆ. ರೋಹಿತ್ ಜೊತೆ ಮೊದಲ ವಿಕೆಟ್ಗೆ 40 ರನ್ಗಳ ಜೊತೆಯಾಟ ಆಡಿದರು. ಬಳಿಕ, ಗಿಲ್ ಜೊತೆಗೂಡಿ 49 ರನ್ಗಳ ಕಾಣಿಕೆ ನೀಡಿದರು. ಸದ್ಯ ಶ್ರೇಯಸ್ ಅಯ್ಯರ್ ಜೊತೆಗೂಡಿ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಅರ್ಧಶತಕ
ರೋಹಿತ್ 14 ರನ್ ಗಳಿಸಿದ್ದಾಗ ಶೋಯೆಜ್ ಬಶೀರ್ ಬೌಲಿಂಗ್ನಲ್ಲಿ ಒಲ್ಲಿ ಪೋಪ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶುಭ್ಮನ್ ಗಿಲ್ 34 ರನ್ ಗಳಿಸಿದ್ದಾಗ ಜೇಮ್ಸ್ ಅ್ಯಂಡರ್ಸನ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ಎರಡು ವಿಕೆಟ್ ಬಿದ್ದರೂ ಎದೆಗುಂದದೆ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ 89 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಮೂರನೇ ಅರ್ಧಶತಕವಾಗಿದೆ.
ಅಯ್ಯರ್ ಜೊತೆ 74* ಜೊತೆಯಾಟ
ಭೋಜನ ವಿರಾಮದ ಬಳಿಕ ಸೆಕೆಂಡ್ ಸೆಷನ್ ಆರಂಭವಾಗಿದೆ. ಸದ್ಯ ಯಶಸ್ವಿ ಜೈಸ್ವಾಲ್ 2 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 93* ಹಾಗೂ ಶ್ರೇಯಸ್ ಅಯ್ಯರ್ ಅಜೇಯ 22* ರನ್ ಗಳಿಸಿ ಆಡುತ್ತಿದ್ದಾರೆ. 47 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಭಾರತ 163 ರನ್ ಪೇರಿಸಿದೆ.
5⃣0⃣ up & going strong! ? ?
Yashasvi Jaiswal notches up his 3⃣rd Test half-century! ? ?#TeamIndia inching closer to 100.
Follow the match ▶️ https://t.co/X85JZGt0EV #INDvENG | @IDFCFIRSTBank pic.twitter.com/lcFpE9yggl
— BCCI (@BCCI) February 2, 2024


