ಬೆಂಗಳೂರು : ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ.
ಇನ್ನಿಂಗ್ಸ್ ಆರಂಭದಿಂದಲೂ ಸಹ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದರೂ ಜೈಸ್ವಾಲ್ ಆಂಗ್ಲರ ವಿರುದ್ಧ ಪ್ರತಿದಾಳಿ ನಡೆಸುತ್ತಿದ್ದಾರೆ.
257 ಎಸೆತಗಳನ್ನು ಎದುರಿಸಿರುವ ಯಶಸ್ವಿ ಜೈಸ್ವಾಲ್ 17 ಬೌಂಡರಿ ಹಾಗೂ 5 ಬೊಂಬಾಟ್ ಸಿಕ್ಸರ್ ನೆರವಿನೊಂದಿಗೆ ಅಜೇಯ 179* ರನ್ ಸಿಡಿಸಿದ್ದಾರೆ. ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 80 ರನ್ ಗಳಿಸಿ ಶತಕದ ಸಂಭ್ರಮದ ಅವಕಾಶ ಕಳೆದುಕೊಂಡಿದ್ದ ಜೈಸ್ವಾಲ್, ಈಗ ಮುಯ್ಯಿ ತೀರಿಸಿಕೊಂಡಿದ್ದಾರೆ.
ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 80, ಎರಡನೇ ಇನ್ನಿಂಗ್ಸ್ನಲ್ಲಿ 15 ರನ್ ಗಳಿಸಿದ್ದರು. ಇನ್ನೂ ವೆಸ್ಟ್ ಇಂಡೀಸ್ ವಿರುದ್ದದ 171 ರನ್ಗಳ ದಾಖಲೆಯನ್ನು ಈ ಪಂದ್ಯದಲ್ಲಿ ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಒಂದು ದಿನದ ಆಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರರ ಪೈಕಿ ಜೈಸ್ವಾಲ್ ಮೂರನೇ ಸ್ಥಾನದಲ್ಲಿದ್ದಾರೆ.
ಅಜರುದ್ದೀನ್ ದಾಖಲೆ ಉಡೀಸ್
ಕರುಣ್ ನಾಯರ್ (ಚೆನ್ನೈ-2016) 232 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಸುನಿಲ್ ಗವಾಸ್ಕರ್ (ದಿ ಓವಲ್-1979) 179 ರನ್ ಗಳಿಸಿ ಎರಡನೇ ಸ್ಥಾನ, ಯಶಸ್ವಿ ಜೈಸ್ವಾಲ್ (ವೈಜಾಗ್-2024) ಅಜೇಯ 179* ರನ್ ಹಾಗೂ ಮೊಹಮ್ಮದ್ ಅಜರುದ್ದೀನ್ (ಮ್ಯಾಂಚೆಸ್ಟರ್-1990) 175 ರನ್ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.
ಮೊದಲ ದಿನದಾಟ ಅಂತ್ಯಕ್ಕೆ 336 ರನ್
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 93 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿದೆ. ಯಶಸ್ವಿ ಜೈಸ್ವಾಲ್ ಅಜೇಯ 179* ಹಾಗೂ ರವಿಚಂದ್ರನ್ ಅಶ್ವಿನ್ ಅಜೇಯ 5* ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಬಶೀರ್ ಹಾಗೂ ರೆಹಾನ್ ತಲಾ 2, ಆಂಡರ್ಸನ್ ಮತ್ತು ಹಾರ್ಟ್ಲಿ ತಲಾ 1 ವಿಕೆಟ್ ಪಡೆದರು.
Stumps on Day 1 of the 2nd Test.
Yashasvi Jaiswal batting beautifully on 179*
Scorecard – https://t.co/X85JZGt0EV #INDvENG @IDFCFIRSTBank pic.twitter.com/XlRqDI8Sgt
— BCCI (@BCCI) February 2, 2024


