Site icon PowerTV

ಗಂಡನ ಹಣ ಕಿತ್ತು ಹೆಂಡ್ತಿಗೆ ಕೊಡ್ತಾರಾ ಸಿದ್ದರಾಮಯ್ಯ ಎಂದ ಆರ್. ಅಶೋಕ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಗೆ ಬೂಸ್ಟ್‌ ನೀಡಿದರೆ, ಸಿದ್ದರಾಮಯ್ಯ ಅವರು ಗಂಡನ ಹಣವನ್ನು ಕಿತ್ತು ಹೆಂಡತಿಗೆ ಕೊಡುತ್ತಾರಾ ಎಂದು ವಿಪಕ್ಷನಾಯಕ ಆರ್​.ಅಶೋಕ್​ ಪ್ರಶ್ನೆ ಮಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ ಉತ್ತಮವಾಗಿದೆ. ಭಾರತದ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಇದು ಸಹಕಾರಿಯಾಗಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೆಸರಲ್ಲಿ ಬಜೆಟ್ ಮಂಡನೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬಜೆಟ್ ಅನ್ನು ಮಂಡಿಸಿಲ್ಲ. ಸರ್ವರ ಏಳ್ಗೆಗೆ, ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್ ಇದಾಗಿದೆ. ಏಳು ಲಕ್ಷ ರೂಪಾಯಿವರೆಗೂ ತೆರಿಗೆ ಇಲ್ಲ.

ಒಂದು ಲಕ್ಷ ಕುಟುಂಬಕ್ಕೆ ಸೋಲಾರ್ ಎನರ್ಜಿ ಬಳಕೆಗೆ ಒತ್ತು ನೀಡಲಾಗಿದೆ. ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ನೀಡಲಾಗಿದೆ. 9-15 ವರ್ಷದ ಮಕ್ಕಳಿಗೆ ಉಚಿತ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ವಸತಿ ನೀಡಲು ಮುಂದಾಗಲಾಗಿದೆ ಎಂದು ವಿವರಿಸಿದರು.

Exit mobile version