Site icon PowerTV

3 ದಶಕಗಳ ಬಳಿಕ ಜ್ಞಾನವಾಪಿ ಮಂದಿರದಲ್ಲಿ ಕಾಶಿ ವಿಶ್ವನಾಥನಿಗೆ ಪೂಜೆ

ಬೆಂಗಳೂರು : 3 ದಶಕಗಳ ನಂತರ ಜ್ಞಾನವಾಪಿ ಮಂದಿರ (ಮಸೀದಿ)ದಲ್ಲಿ ಕಾಶಿ ವಿಶ್ವನಾಥನಿಗೆ ಹಿಂದೂಗಳು ಪೂಜೆ ಸಲ್ಲಿಸಿದರು.

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದ ಬೆನ್ನಲ್ಲೇ, ಹಿಂದೂ ಅರ್ಚಕರ ಕುಟುಂಬದವರು ಪೂಜಾ ಕಾರ್ಯ ನಡೆಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಘಟನೆ ನಡೆದ ಬಳಿಕ ಉತ್ತರ ಪ್ರದೇಶದ ಆಗಿನ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಆದೇಶದಂತೆ ಜ್ಞಾನವಾಪಿ ಮಸೀದಿ ನೆಲಮಾಳಿಗೆಗೆ ಬೀಗ ಮುದ್ರೆ ಹಾಕಲಾಗಿತ್ತು. 30 ವರ್ಷಗಳ ಬಳಿಕ ಅದನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು.

ಭಾರಿ ಭದ್ರತೆಯೊಂದಿಗೆ ಆರತಿ

ಈ ಆದೇಶದ ಬಳಿಕ ಮಧ್ಯರಾತ್ರಿಯೇ ನೆಲಮಾಳಿಗೆಯಲ್ಲಿನ ದೇವರ ವಿಗ್ರಹಗಳಿಗೆ ಪೂಜೆಗೆ ಸಿದ್ಧತೆ ಆರಂಭವಾಗಿದ್ದು, ಭಾರಿ ಭದ್ರತೆಯೊಂದಿಗೆ ಆರತಿ ಬೆಳಗಿಸಲಾಗಿತು. ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಪ್ರಕ್ರಿಯೆಗಳನ್ನು ನಡೆಸಲಾಗಿದೆ.

ಪ್ರತಿ ದಿನವೂ ಅರ್ಚಕರಿಂದ ಪೂಜೆ

ವಿಗ್ರಹಗಳನ್ನು ಸ್ಥಾಪಿಸಿದ ಬಳಿಕ ಕೆವಿಎಂ ಟ್ರಸ್ಟ್‌ನ ಅರ್ಚಕರು ಶಾಯನ್ ಆರತಿ ಬೆಳಗಿದ್ದಾರೆ. ಅವುಗಳ ಮುಂದೆ ಅಖಂಡ ಜ್ಯೋತಿ ಬೆಳಗಿಸಲಾಗಿದೆ. ಎಲ್ಲಾ ದೇವತೆಗಳ ವಿಗ್ರಹಗಳಿಗೂ ಬೆಳಗ್ಗೆ ಮಂಗಳಾರತಿ, ಭೋಗ ಆರತಿ, ಸಂಜೆ ಆರತಿ, ಸೂರ್ಯಾಸ್ತದ ಆರತಿ ಹಾಗೂ ಶಾಯನ್ ಆರತಿಯನ್ನು ಪ್ರತಿ ದಿನವೂ ನಡೆಸಲಾಗುತ್ತದೆ.

Exit mobile version