Site icon PowerTV

ಆಪರೇಷನ್ ನಿಮಗೆ ಹೇಳಿ ಮಾಡಬೇಕಾ..? : ವಿಜಯೇಂದ್ರ ಹೊಸ ಬಾಂಬ್

ಹುಬ್ಬಳ್ಳಿ : ಆಪರೇಶನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಆಪರೇಷನ್ ನಿಮಗೆ ಹೇಳಿ ಮಾಡಬೇಕಾ..? ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ನೂ ಕಾಂಗ್ರೆಸ್ ಪಕ್ಷದಿಂದ ಬಹಳ ಜನ ಬಿಜೆಪಿಗೆ ಬರುವವರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗಳಿಸುವುದೇ ನಮ್ಮ ಗುರಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ. ಸುರೇಶ ಹೇಳಿಕೆ ವಿಚಾರವಾಗಿ ಮಾತನಾಡಿ, ಡಿ.ಕೆ. ಸುರೇಶ್ ಅವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕಾಗುತ್ತದೆ. ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಡಿ.ಕೆ. ಸುರೇಶ್​ ಅವರು ಈ ರೀತಿ ಮಾತನಾಡುವುದು ಖಂಡನೀಯ ಎಂದು ಕುಟುಕಿದ್ದಾರೆ.

ರಾಷ್ಟ್ರ ಇಬ್ಭಾಗದ ಮಾತು ಖಂಡನೀಯ

ಒಬ್ಬ ಜನಪ್ರತಿನಿಧಿಗಳು ಈ ರೀತಿ ಮಾತನಾಡಬಾರದು. ಭಾರತದ ಅಖಂಡತೆಯನ್ನ ಕಾಪಾಡುವುದಾಗಿ ಪ್ರಮಾಣ ವಚನ‌ ತೆಗೆದುಕೊಂಡಿರುತ್ತಾರೆ. ಈ ರೀತಿ ರಾಷ್ಟ್ರ ಇಬ್ಭಾಗದ ಮಾತುಗಳನ್ನಾಡುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಬಂದ್ಮೇಲೆ 2 ಲಕ್ಷ ಕೋಟಿ‌ ರಾಜ್ಯಕ್ಕೆ ಬಂದಿದೆ

ಯುಪಿಎ ಸರ್ಕಾರ ಇದ್ದಾಗ 81 ಕೋಟಿ‌ ಹಣ ತೆರಿಗೆ ಹಣ ಬಂದಿದೆ. ನಮ್ಮ ಸರ್ಕಾರ ಬಂದಮೇಲೆ 2 ಲಕ್ಷ ಕೋಟಿ‌ ತೆರಿಗೆ ಹಣ ರಾಜ್ಯಕ್ಕೆ ಬಂದಿದೆ. ಆದರೂ, ಅವರು ಅನುದಾನದಲ್ಲಿ ತಾರತಮ್ಯವಾಗುತ್ತಿದೆ ಅಂತ ಆರೋಪ ಮಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

Exit mobile version