Site icon PowerTV

ಪ್ರೇಯಸಿ ರುಂಡ ಕಡಿದ ಪಾಗಲ್ ಪ್ರೇಮಿಗೆ ಜೀವಾವಧಿ ಶಿಕ್ಷೆ

ಹೊಸಪೇಟೆ : ಮಾಜಿ ಪ್ರೇಯಸಿಯ ರುಂಡ ಕಡಿದ ಪಾಗಲ್ ಪ್ರೇಮಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಭೋಜರಾಜ ಎಂಬಾತನೇ ಜೈಲುಪಾಲಾದ ಕಿರಾತಕ.

ಹೊಸಪೇಟೆ ಸಿವಿಲ್ ಜಡ್ಜ್ ಸೀನಿಯರ್ ಡಿವಿಜನ್ ಹಾಗೂ ಜೆಎಂಎಫ್​ಸಿ (JMFC) ಕೋರ್ಟ್‌ನಿಂದ ತೀರ್ಪು ಹೊರಬಿದ್ದಿದೆ. ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ನಂದಡಗಿ ಆದೇಶ ಹೊರಡಿಸಿದ್ದಾರೆ.

ಅಪರಾಧಿ ಭೋಜರಾಜ ತನ್ನ ಮಾಜಿ ಪ್ರೇಯಸಿಯಾಗಿದ್ದ ನಿರ್ಮಲಾ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ. ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಈ ಪಾಗಲ್ ಪ್ರೇಮಿ ಭೋಜರಾಜ ಕೇಳಿದ್ದ. ಯುವತಿಯ ಮನೆಯವರು ಒಪ್ಪದಿದ್ದಾಗ ಬೇರೆ ಯುವತಿಯನ್ನು ಮದುವೆಯಾಗಿದ್ದ. ತನ್ನ ಮದುವೆಯಾಗಿ ಎರಡು ತಿಂಗಳ ನಂತರ ಊರಿಗೆ ಬಂದ ನಿರ್ಮಲಾಳ ತಲೆಯನ್ನು ಮಚ್ಚಿನಿಂದ ಕಡಿದು, ರುಂಡದೊಂದಿಗೆ ಠಾಣೆಗೆ ಬಂದು ಭೋಜರಾಜ ಶರಣಾಗಿದ್ದ.

ಘಟನೆ ನಡೆದಿದ್ದು ಯಾವಾಗ?

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಕಳೆದ ವರ್ಷ ಜುಲೈ 21ರಂದು ಈ ಭೀಕರ ಘಟನೆ ನಡೆದಿತ್ತು. ಅಪರಾಧಿ ಭೋಜರಾಜ ತನ್ನ ಮಾಜಿ ಪ್ರೇಯಸಿಯಾಗಿದ್ದ ನಿರ್ಮಲಾ (23) ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಮಾಡಿದ ತಪ್ಪಿಗೆ ಇದೀಗ ಭೋಜರಾಜ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

Exit mobile version