Site icon PowerTV

ಹೃದಯಾಘಾತದಿಂದ ರಸ್ತೆಯಲ್ಲೇ ಯುವಕ ಸಾವು

ಉತ್ತರಪ್ರದೇಶ : ರಸ್ತೆಯಲ್ಲಿ ಯುವಕ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಉತ್ತರಪ್ರದೇಶದ ಲಖೀಂಪುರದಲ್ಲಿ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಸುಮಿತ್ ಮೌರ್ಯ ಎಂಬಾತನೇ ಮೃತ ದುರ್ದೈವಿ. ಸುಮಿತ್ ಮೌರ್ಯ ಎಂಬ ಯುವಕ ಕೈಯಲ್ಲೊಂದು ಬ್ಯಾಗ್ ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ದಿಢೀರನೆ ರಸ್ತೆ ಮೇಲೆ ಪ್ರಜ್ಞೆತಪ್ಪಿ ಬಿದ್ದಿದ್ದ.

ಯುವಕ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಕಾರೊಂದು ಬರುತ್ತಿದ್ದು, ಆತ ಕುಸಿದು ಬಿದ್ದ ವೇಳೆ ಕಾರು ಆತನ ತಲೆಗೆ ಡಿಕ್ಕಿ ಹೊಡೆದಿತ್ತು. ಕಿರಿದಾದ ಹಾಗೂ ಜನಸಂದಣಿಯ ದಾರಿಯಲ್ಲಿ ಕಾರು ಬರುತ್ತಿದ್ದ ವೇಳೆ ಸುಮಿತ್ ದಿಢೀರನೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದ.

ಈ ವೇಳೆ ಎಸ್​ಯುವಿ ಮುಂಭಾಗ ಸುಮಿತ್ ತಲೆಗೆ ಹೊಡೆದ ಪರಿಣಾಮ ಗಾಯವಾಗಿತ್ತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Exit mobile version