Site icon PowerTV

ರಾಹುಲ್ ಗಾಂಧಿ ನೀವು ‘ಪಪ್ಪು’, ‘ಪಪ್ಪು’ ಆಗಿ ಉಳಿಯುತ್ತೀರಿ, ಎಂದೆಂದಿಗೂ ‘ಪಪ್ಪು’ವೇ : ಲಲನ್ ಸಿಂಗ್

ಬೆಂಗಳೂರು : ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಸಂಯುಕ್ತ ಜನತಾದಳದ ಮುಖಂಡ ಹಾಗೂ ಸಂಸದ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರ ಬೆದರಿಕೆಗೆ ಹೆದರಿ ನಿತೀಶ್ ಕುಮಾರ್ I.N.D.I.A ಒಕ್ಕೂಟ ಬಿಟ್ಟು ಓಡಿ ಹೋದರು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಅವರನ್ನು ದೇಶದ ಜನತೆ ಪಪ್ಪು ಎಂದು ಕರೆಯುವುದು ಸರಿಯಾಗಿದೆ. ಇನ್ನೂ ಒಂದು ವಿಷಯ, ರಾಹುಲ್ ಗಾಂಧಿ ನೀವು ‘ಪಪ್ಪು’, ‘ಪಪ್ಪು’ ಆಗಿ ಉಳಿಯುತ್ತೀರಿ ಮತ್ತು ನಿಮ್ಮ ‘ಜೋಕ್’ಗಳಿಂದ ದೇಶವನ್ನು ‘ರಂಜಿಸುತ್ತಿರುತ್ತೀರಿ’. ಎಂದೆಂದಿಗೂ ಪಪ್ಪುವೇ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸಿಎಂ ನಿತೀಶ್ ಕುಮಾರ್ ತಮ್ಮ ಜೀವನದಲ್ಲಿ ಎಂದೂ ಯಾರಿಗೂ ಹೆದರಿದವರೂ ಅಲ್ಲ. ಯಾರ ಒತ್ತಡಕ್ಕೆ ಮಣಿದವರೂ ಅಲ್ಲ. ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆದು ಮೂರು ದಿನವಾದ ಬಳಿಕ ರಾಹುಲ್ ಗಾಂಧಿ ಬಿಹಾರ ಪ್ರವೇಶಿಸುವ ಧೈರ್ಯ ತೋರಿಸಿದ್ದಾರೆ ಎಂದು ಕುಟುಕಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಪುರ್ನಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಸಿಎಂ ನಿತೀಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದರು. ಮಹಾಘಟಬಂಧನ್​ನ ಪಕ್ಷಗಳ ಒತ್ತಡಕ್ಕೆ ಮಣಿದು ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿಗಣತಿ ನಡೆಸಿದ್ದರು. ಬಳಿಕ ಬಿಜೆಪಿಯವರ ಬೆದರಿಕೆಗೆ ಹೆದರಿ I.N.D.I.A ಒಕ್ಕೂಟ ಬಿಟ್ಟು ಓಡಿ ಹೋದರು ಎಂದು ದೂರಿದ್ದರು.

Exit mobile version