Site icon PowerTV

ಸೋ ಬ್ಯುಟಿಫುಲ್.. ಶ್ವಾನಗಳ ಜತೆ ಬಾಲಕಿ ಸೈಕಲ್ ಸವಾರಿ

ಬೆಂಗಳೂರು : ಪುಟ್ಟ ಬಾಲಕಿಯೊಬ್ಬಳು ಶ್ವಾನಗಳ ಜೊತೆಗೆ ಸೈಕಲ್ ಸವಾರಿ ಮಾಡಿದ್ದಾಳೆ. ಈ ಮುದ್ದಾದ ವಿಡಿಯೋ ಪ್ರಾಣಿ ಪ್ರಿಯರ ಮನಗೆದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಶ್ವಾನಗಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ಸೈಕಲ್ ಸವಾರಿ ಹೊರಟಿರುವ ಮುದ್ದಾದ ದೃಶ್ಯ ಕಾಣಬಹುದು. ಈ ವೈರಲ್ ವಿಡಿಯೋವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸೋ ಬ್ಯುಟಿಫುಲ್ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಆಕೆಯ ಮನೆಯ ಮೂರು ಶ್ವಾನಗಳನ್ನು ಸೈಕಲ್ ಮೇಲೆ ಕೂರಿಸಿಕೊಂಡು, ಮನೆಯ ಸುತ್ತಲೂ ಸವಾರಿ ಮಾಡಿದ್ದಾಳೆ. ಶ್ವಾನಗಳು ಕೂಡಾ ಸೈಕಲ್ ಸವಾರಿಯನ್ನು ಬಹಳ ಎಂಜಾಯ್ ಮಾಡುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.

Exit mobile version