Site icon PowerTV

ಬಳ್ಳಾರಿಯಲ್ಲಿ ವಸತಿಗಾಗಿ ಮಂಗಳಮುಖಿಯರ ಪ್ರತಿಭಟನೆ

ಬಳ್ಳಾರಿ : ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಟ್ರಾನ್ಸ್ ಜೆಂಡರ್ಸ್ ಸಮುದಾಯಕ್ಕೆ ವಸತಿ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬಳ್ಳಾರಿಯಲ್ಲಿ ಪ್ರಗತಿ ಸದಾ ಸೇವಾ ಸಂಘ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ‌ಮೂಲಕ ರಾಜ್ಯ ಸರಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಆರ್ಥಿಕ ಸಂಕಷ್ಟದಲ್ಲಿದ್ದು, ವಾಸಿಸಲು ಮನೆ ಇಲ್ಲದ‌ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದೇವೆ. ಬಾಡಿಗೆ ಮನೆ ಸಿಗುತ್ತಿಲ್ಲ. ಒಂದು ವೇಳೆ ಬಾಡಿಗೆ ಮನೆ ಸಿಕ್ಕರೆ ಊರ ಹೊರಗೆ ದೊರೆಯುತ್ತದೆ. ಬಾಡಿಗೆ ಕೂಡ ಜಾಸ್ತಿ ಇರುತ್ತದೆ. ಕೆಲಸವಿಲ್ಲದೆ ಹಾಗೂ ಭಿಕ್ಷಾಟಣೆ ಮಾಡಿ ಬಂದ ಹಣದಲ್ಲಿ ಬಾಡಿಗೆ ಕಟ್ಟಲು ತೀರ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಮುಖಕ್ಕೆ ಸೊಳ್ಳೆ ಪರದೆ ಹಾಕಿಕೊಂಡು ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭಟನೆ

ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವರಿಗೆ ಪ್ರಗತಿ ಸದಾ ಸೇವಾ ಸಂಘ ದಡಿಯಲ್ಲಿ ವಸತಿ ಕಲ್ಪಿಸಬೇಕು‌. ಮಂಗಳಮುಖಿಯರಿಗೆ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಸೌಲಭ್ಯ ಸರಕಾರ ನೀಡಬೇಕು ಎಂದು ಪ್ರಗತಿ ಸದಾ ಸೇವಾ ಸಂಘದ ಕಾರ್ಯದರ್ಶಿ ಚಂದಿನಿ ಒತ್ತಾಯಿಸಿದರು.

Exit mobile version