Site icon PowerTV

ದಚ್ಚು-ಕಿಚ್ಚ ಜೊತೆಗಿನ ಹಳೆ ಫೋಟೋ ಹಂಚಿಕೊಂಡ ನಟಿ ರೇಖಾ

ಬೆಂಗಳೂರು : ಸ್ಯಾಂಡಲ್​ವುಡ್ ನಟಿ ರೇಖಾ ಅವರು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಜೊತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇಬ್ಬರೂ ನಟರೊಂದಿಗೆ ತಮ್ಮ ಚೊಚ್ಚಲ ಸಿನಿಮಾದ ಹಳೆಯ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ, ‘ಒಳ್ಳೆಯ ಹಳೆ ನೆನಪುಗಳು’ (ಗುಡ್ ಓಲ್ಡ್ ಮೆಮೊರೀಸ್) ಎಂದು ಬರೆದು ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ದರ್ಶನ್​ ನಟನೆಯ ‘ಮೆಜೆಸ್ಟಿಕ್’ ಹಾಗೂ ಸುದೀಪ್ ನಟನೆಯ ‘ಸ್ಪರ್ಷ’ ಸಿನಿಮಾದಲ್ಲಿ ರೇಖಾ ಅವರು ನಾಯಕನಟಿಯಾಗಿ ಅಭಿನಯಿಸಿದ್ದರು. ಎರಡು ಸಿನಿಮಾಗಳು ಕಿಚ್ಚ-ದಚ್ಚು ಇಬ್ಬರಿಗೂ ಬ್ರೇಕ್​ ಕೊಟ್ಟಿದ್ದವು. ಈ ಚಿತ್ರದಲ್ಲಿ ರೇಖಾ ಅವರೇ ನಾಯಕಿಯಾಗಿದ್ದರು. ಈ ಸಿನಿಮಾದ ಫೋಟೋಗಳನ್ನು ರೇಖಾ ಹಂಚಿಕೊಂಡಿದ್ದಾರೆ. ಇನ್ನು, ಸುದೀಪ್ ಹಾಗೂ ದರ್ಶನ್ ಇಬ್ಬರೊಟ್ಟಿಗೂ ರೇಖಾ ಗೆಳೆತನವನ್ನು ಈಗಲೂ ಮುಂದುವರಿಸಿದ್ದಾರೆ.

ದಚ್ಚು ಹಾಗೂ ಕಿಚ್ಚ ಮತ್ತೆ ಒಂದಾಗಬೇಕು

ದಚ್ಚು ಹಾಗೂ ಕಿಚ್ಚ ಮತ್ತೆ ಒಂದಾಗಬೇಕು ಎಂಬುವುದು ಕೋಟ್ಯಂತರ ಅಭಿಮಾನಿಗಳ ಕೂಗು ಹಾಗೂ ಆಸೆಯೂ ಹೌದು. ನಿನ್ನೆಯಷ್ಟೇ ಕೆಲವು ಅಭಿಮಾನಿಗಳು ಇಬ್ಬರ ಸ್ನೇಹದ ಬಗ್ಗೆ ಕೇಳಿದ್ದ ಪ್ರಶ್ನೆಗೆ ಸುದೀಪ್ ಮುಕ್ತವಾಗಿ ಉತ್ತರಿಸಿದ್ದರು. ಸುದೀಪ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಇಂದಿಗೆ 28 ವರ್ಷ ಉರುಳಿವೆ. ಈ ವಿಶೇಷ ಸಂದರ್ಭದಲ್ಲೇ ನಟಿ ರೇಖಾ ದರ್ಶನ್ ಹಾಗೂ ಸುದೀಪ್ ಜೊತೆಗಿನ ಹಳೆ ನೆನಪು ಹಂಚಿಕೊಂಡಿರುವುದು ವಿಶೇಷ.

Exit mobile version