Site icon PowerTV

‘ನಮ್ಮ ಮೆಟ್ರೋ’ ಹಳದಿ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ರೈಲು ಸಂಚಾರ  

ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗದ ವಾಣಿಜ್ಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರವೇ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ ಸಂಸ್ಥೆೆಯು ಪ್ರೋಟೋ ಟೈಪ್ ಬೋಗಿಗಳನ್ನು ಒದಗಿಸುತ್ತಿದೆ. ಈಗಾಗಲೇ ಬೋಗಿಗಳು ಭಾರತಕ್ಕೆೆ ರವಾನೆಯಾಗಿವೆ. ಮುಂದಿನ ತಿಂಗಳ ಫೆಬ್ರುವರಿಯಲ್ಲಿ ಬೆಂಗಳೂರಿಗೆ ಆಗಮಿಸಲಿದ್ದು, ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದು ಪ್ರಾಯೋಗಿಕ ಸಂಚಾರ ನಡೆಯಲಿದೆ.

ಪ್ರಾಯೋಗಿಕ ಕಾರ್ಯಾಚರಣೆಗೆಂದೇ ಬೋಗಿ ಪೂರೈಸಿದ ಕಂಪನಿಯ ಸುಮಾರು 15 ಅಧಿಕಾರಿಗಳು ಆಗಮಿಸಲಿದ್ದಾರೆ. ಬಳಿಕ ಒಂದಷ್ಟು ತಾಂತ್ರಿಕ ಅನುಮೋದನೆಗಳು ಮತ್ತು ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಯಲಿದೆ. ಹಳದಿ ಮಾರ್ಗದಲ್ಲಿ ಸಿವಿಲ್ ಮತ್ತು ಟ್ರ್ಯಾಕ್ ಪರಿಶೀಲನೆ ಕೆಲಸ ಮುಗಿದಿದ್ದು, ಇನ್ನಷ್ಟು ಕೆಲಸಗಳು ನಡೆಯುತ್ತಿವೆ.

ಆ ಬಳಿಕ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆೆ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಚೀನಾ ಕಂಪನಿಯು ನಮ್ಮ ಮೆಟ್ರೋಗೆ 216 ಕೋಚ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ 216 ಕೋಚ್‌ಗಳಲ್ಲಿ 90 ಕೋಚ್​ಗಳನ್ನು 19.15 ಕಿಮೀ ಹಳದಿ ಮಾರ್ಗದಲ್ಲಿ ಓಡಿಸಲು ನಮ್ಮ ಮೆಟ್ರೋ ಪ್ಲಾನ್ ಮಾಡಿದೆ.

Exit mobile version