Site icon PowerTV

ಹೌದು.. ಕಾಂಗ್ರೆಸ್ ಹಿಂದೂ ವಿರೋಧಿನೇ.. : ಸಚಿವ ತಿಮ್ಮಾಪೂರ

ರಾಯಚೂರು : ಪ್ರಶ್ನೆ ಇವರದೇ, ಇವರದೇ ಉತ್ತರ. ಕಾಂಗ್ರೆಸ್ ಹಿಂದೂ ವಿರೋಧಿನಾ..? ಹೌದು.. ಹಿಂದೂ ವಿರೋಧಿನೇ.. ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಕಿಡಿಕಾರಿದರು.

ರಾಯಚೂರಿನ ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂಜಾನೆಯಾದ ಕೂಡಲೇ ಚಾಲೂ.. ಕಾಂಗ್ರೆಸ್‌ನವರು ಹಿಂದು ವಿರೋಧಿಗಳು ಅಂತಾರೆ. ಇವರು ಒಬ್ಬರೇ ಹಿಂದೂ ಧರ್ಮ, ದೇಶ ಕಟ್ಟಿದವರು, ನಾನೂ ಹಿಂದೂನೇ.. ಎಂದು ಆಕ್ರೋಶ ಹೊರಹಾಕಿದರು.

ಶಾಸಕ ರವಿ ಗಣಿಗಗೆ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕರ ಬದುಕಿಗೆ ತೊಂದರೆ ಕೊಟ್ಟವರು, ಶಾಸಕರಿಗೆ ಬಿಡ್ತಾರಾ..? ಹನುಮ‌ ಧ್ವಜ ಯಾರು ತೆಗೆದರು? ಹೇ ಕಾಂಗ್ರೆಸ್‌ನವರು ತೆಗೆದರು.. ಹಿಂದೂ ಧರ್ಮ ಇವರ ಆಸ್ತಿನಾ..? ಇವರಿಗೇನು ಗುತ್ತಿಗೆ ಕೊಟ್ಟಿದ್ದೇವಾ..? ಹಿಂದೂ ಧರ್ಮ ಯಾರಪ್ಪನ ಆಸ್ತಿಯಲ್ಲ, ಎಲ್ಲರ ಆಸ್ತಿ ಎಂದು ಕುಟುಕಿದರು.

ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದರೆ ಸಹಿಸಲ್ಲ

ಚುನಾವಣೆಗಳು ಬಂದಾಗ ಒಂದು ಪಕ್ಷ‌ ಇಂಥ ಕೋಮುವಾದಕ್ಕೆ ಉದ್ದೇಶಪೂರಕವಾಗಿ ಉತ್ತೇಜನ ಕೊಡುತ್ತೆ. ಅದರ ಪರಿಣಾಮವಾಗಿ ಇಂತಹ ಘಟನೆಗಳು ನಡೆಯುತ್ತವೆ. ನಾವು ರಾಷ್ಟ್ರಧ್ವಜವನ್ನ ಪ್ರೀತಿ ಮಾಡುವಂತವರು. ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದರೆ ನಾವು ಸಹಿಸಲ್ಲ. ಚುನಾವಣೆ ಬಂದಾಗಲೆಲ್ಲಾ ಬಿಜೆಪಿಯವರು ಧರ್ಮ, ರಾಮ, ಹನುಮಂತ ಎನ್ನುತ್ತಾರೆ. ಇತಿಹಾಸ ತೆಗೆದು ನೋಡ್ರಿ, ಚುನಾವಣಾ ವರ್ಷದಲ್ಲಿ ಪ್ರಾರಂಭ ಮಾಡುತ್ತಾರೆ. ಇವರ ದಂಧೆ ಉದ್ಯೋಗ ಅದೊಂದೇ ಎಂದು ಸಚಿವ ಆರ್.ಬಿ. ತಿಮ್ಮಾಪೂರ ವಾಗ್ದಾಳಿ ನಡೆಸಿದ್ದಾರೆ.

Exit mobile version