Site icon PowerTV

BigBoss ಟ್ರೋಫಿ ಸಿಗದಿರಬಹುದು, ನಿಮ್ಮ ಪ್ರೀತಿಯ ಗೆಲುವನ್ನು ತಂದುಕೊಟ್ಟಿದೆ: ಸಂಗೀತ ಶೃಂಗೇರಿ!

ಬಿಗ್ ಬಾಸ್​ ಸೀಸನ್​ 10ರ ಸೆಕೆಂಡ್ ರನ್ನರ್ ಅಪ್​ ಆಗಿ ಹೊರಹೊಮ್ಮಿರುವ ಸಂಗೀತಾ ಶೃಂಗೇರಿ, ಅಭಿಮಾನಿಗಳನ್ನು ಮತ್ತು ನಾಡಿನ ಬಿಗ್ ಬಾಸ್​ ಪ್ರಿಯರನ್ನುದ್ದೇಶಿಸಿ ಇಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ; ಹಿಂದೂ ಸಂಘಟನೆ ವಿರೋಧ!

ಬಿಗ್​ ಬಾಸ್​ ಸೀಸನ್​ 10ರ ಫಿನಾಲೆ ವಾರದಲ್ಲಿ 6 ಸ್ಪರ್ಧಿಗಳಿದ್ದರು, 6ರಿಂದ ಟಾಪ್‌ 5 ಸೆಲೆಕ್ಟ್ ಆದಾಗಲೂ ಜನರನ್ನು ರಂಜಿಸಿದ ಇವರು ಸೆಕೆಂಡ್ ರನ್ನರ್ ಅಪ್ ಆಗಿ ಬಿಗ್ ಬಾಸ್​ ಮನೆಯಿಂದ ಹೊರಬಂದ ಬಳಿಕ ಇಂದು ತಮ್ಮ ಪ್ರೀತಿಯ ಅಭಿಮಾನಿಗಳು ಮತ್ತು ಪ್ರೋತ್ಸಾಹಕರಿಗೆ ಮತ್ತು ಕನ್ನಡದ ಜನತೆಯನ್ನುದ್ದೇಶಿಸಿ ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್​ ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಈ ಪೋಸ್ಟ್​​ನಲ್ಲಿ

ನನ್ನ ಪ್ರೀತಿಯ ಅಭಿಮಾನಿಗಳಿಗೆ/ ಪ್ರೋತ್ಸಾಹಕರಿಗೆ / ಕನ್ನಡ ಜನತೆಗೆ, ನಿಮ್ಮ ಸಂಗೀತ ಮಾಡುವ ನಮಸ್ಕಾರಗಳು ಎಲ್ಲಾ ಹೇಗಿದ್ದೀರಾ? ನಮ್ಮ ಬಿಗ್ ಬಾಸ್ ಹೇಗಿತ್ತು?

ನನ್ನ ಬಿಗ್ ಬಾಸ್ ಜರ್ನಿ ಅಂತೂ ನಿಮಗೆ ಗೊತ್ತೇ ಇದೆ, ಆದ್ರೆ ನೀವು ಇಲ್ಲಿ ನನಗೆ ಕೊಟ್ಟ ಪ್ರೀತಿ ಸಹಕಾರ ಈಗ ತಿಳಿಯುತ್ತಿರುವ ನನಗೆ, ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ತಿಳಿಯದಾಗಿದೆ. ನನ್ನ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ನಾನು ಎಂದಿಗೂ ಆಭಾರಿ. ಬಿಗ್ ಬಾಸ್ ಟ್ರೋಫಿ ನನಗೆ ಸಿಗದಿರಬಹುದು, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವನ್ನೇ ತಂದುಕೊಟ್ಟಿದೆ. I feel like a true winner because of you

ಇದಕ್ಕೆ ಇರಬೇಕು ನಮ್ಮ ಅಣ್ಣಾವ್ರು ಅಭಿಮಾನಿಗಳನ್ನು ದೇವರಂತೆ ಕಂಡಿದ್ದು
ನಿಮ್ಮ ಪ್ರೀತಿಯ, ಸಂಗೀತ ಶೃಂಗೇರಿ. ಎಂದು ಬರೆದುಕೊಂಡಿದ್ದಾರೆ.

Exit mobile version