Site icon PowerTV

ಗುರಾಯಿಸಿ ನಿಂದಿಸಿದ ಯುವಕನಿಗೆ ಚಾಕು ಇರಿತ

ನೆಲಮಂಗಲ: ತನ್ನನ್ನು ಗುರಾಯಿಸಿ ನಿಂದಿಸಿದ್ದಾಗಿ ವ್ಯಕ್ತಿಯೊಬ್ಬ ಯುವಕನಿಗೆ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಯಾಗಿರುವ ಮಂಜುನಾಥ್ ಕೊಲೆ ಯತ್ನ ಮಾಡಿದ ಆರೋಪಿಯಾಗಿದ್ದು, ಅಶ್ವತ್ಥ್​ ಕುಮಾರ್ (30)​ ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ.

 ಘಟನೆಯ ವಿವರ

ಅಶ್ವತ್ಥ್ ಕುಮಾರ್ ಸೂರ್ಯ ಗ್ಯಾಸ್ ಎಂಬ​ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನನ್ನು ಗುರಾಯಿಸಿದ್ದಲ್ಲದೆ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಮಂಜುನಾಥ್ ತನ್ನ ಡಿಯೋ ಬೈಕ್​ನಲ್ಲಿ ಬಂದು ಅಶ್ವತ್ಥ್​ ಕುಮಾರ್​ಗೆ ಚಾಕು ಇರಿದು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರಾತ್ರೋರಾತ್ರಿ ಕಲ್ಲು ತೂರಾಟ, ಪೊಲೀಸರಿಗೂ ಗಾಯ!

ಗಾಯಾಳು ಅಶ್ವತ್ಥ್ ಕುಮಾರ್​ ಅವರನ್ನು ಕೂಡಲೇ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಅಹಿತಕರ ಘಟನೆಗಳು ನಡಯದಂತೆ ಗ್ರಾಮದಲ್ಲಿ ಪೊಲೀಸನ್ನು ನಿಯೋಜಿಸಲಾಗಿದೆ.

Exit mobile version