ಬೆಂಗಳೂರು : ಸ್ಯಾಂಡಲ್ವುಡ್ ದಿಗ್ಗಜ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದು ಕಾಲದ ಕುಚಿಕುಗಳು. ಈಗ ಅವರ ಮಧ್ಯೆ ವೈಮನಸ್ಸು ಇದೆ. ಆದರೂ, ಕಿಚ್ಚ ಸುದೀಪ್ ನಟ ದರ್ಶನ್ ಅವರಿಗೆ ಒಳ್ಳೆಯದನ್ನೇ ಬಯಸಿದ್ದಾರೆ.
ಬಿಗ್ ಬಾಸ್ ಫೈನಲ್ ಬಳಿಕ ನಟ ಕಿಚ್ಚ ಸುದೀಪ್ ಸ್ವಲ್ಪ ಬಿಡುವು ಮಾಡಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ Askkichcha ಸೆಷನ್ ನಡೆಸಿದ ಅವರಿಗೆ ಅಭಿಮಾನಿಗಳು ಕೆಲವು ಪ್ರಶ್ನೆ ಹೇಳಿದ್ದಾರೆ. ಇದಕ್ಕೆ ಸುದೀಪ್ ಸೌಮ್ಯವಾಗಿಯೇ ಉತ್ತರಿಸಿದ್ದಾರೆ.
ಕೆಲವು ದರ್ಶನ್ ಅಭಿಮಾನಿಗಳು ದರ್ಶನ್ ಹಾಗೂ ಸುದೀಪ್ ಸ್ನೇಹದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ‘ನಿಮ್ಮ ಮತ್ತು ದರ್ಶನ್ ಅವರ ಮಧ್ಯೆ ಇರುವ ಸಮಸ್ಯೆ ಯಾವಾಗ ಪರಿಹಾರವಾಗುತ್ತದೆ? ಇದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.
?…….i wsh him the best always. https://t.co/VR1P9N51u9
— Kichcha Sudeepa (@KicchaSudeep) January 29, 2024
ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, ‘ಸಮಸ್ಯೆ ಏನು ಎಂದು ಇಬ್ಬರೂ (ದರ್ಶನ್ ಹಾಗೂ ನಾನು) ಹುಡುಕುತ್ತಿದ್ದೇವೆ’ ಎಂದು ಹೇಳಿದ್ದಾರೆ. ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದು ಕೇಳಿದರುವ ಪ್ರಶ್ನೆಗೆ, ‘ನಾನು ಯಾವಾಗಲೂ ಅವರಿಗೆ (ದರ್ಶನ್) ಒಳ್ಳೆಯದನ್ನೇ ಬಯಸುತ್ತೇನೆ’ ಎಂದು ಸುದೀಪ್ ಉತ್ತರಿಸಿದ್ದಾರೆ.
Samasye yenu antha ibru hudukthaa idheevi.
? https://t.co/KCyDd8gLad— Kichcha Sudeepa (@KicchaSudeep) January 29, 2024
ಪ್ರತಾಪ್ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರತಾಪ್ ಪ್ರಯತ್ನದ ಫಲವಾಗಿ ಅವರು ಆ ಸ್ಥಾನಕ್ಕೆ ಬಂದಿದ್ದಾರೆ. ಅದನ್ನು ಪ್ರಶಂಸಿಸದಿರುವುದು ಸರಿಯಲ್ಲ ಎಂದಿದ್ದಾರೆ. ಪ್ರತಾಪ್ ಬಗ್ಗೆ ಒಂದು ಮಾತು ಹೇಳಿ ಎಂದಿದ್ದಕ್ಕೆ, ಪ್ರತಾಪ್ ‘ಸ್ವೀಟ್’ ಎಂದು ಹೇಳಿದ್ದಾರೆ.



Pinco bet futbol sevənlər üçün idealdır. Pinco ilə qalib gəlmək indi daha asandır — pinco casino online. Pinco oyunları yüksək səviyyədə qorunur.
Pinco kazino təhlükəsizlik baxımından ideal platformadır.