Site icon PowerTV

ತುಮಕೂರು ಎರಡನೇ ಬೆಂಗಳೂರಾಗಿ ಪರಿಪರ್ವನೆ ಆಗುತ್ತೆ : ಡಿ.ಕೆ. ಶಿವಕುಮಾರ್ ಭರವಸೆ

ತುಮಕೂರು : ತುಮಕೂರು ಜಿಲ್ಲೆ ಎರಡನೇ ಬೆಂಗಳೂರಾಗಿ ಪರಿಪರ್ವನೆ ಆಗುತ್ತೆ ಎಂಬ ನಂಬಿಕೆ ಇದೆ. ಇಂತಹ ಮಟ್ಟವಾದ ಪ್ರದೇಶ, ನೆಲ ಜಲಕ್ಕೆ ತನ್ನದೇ ಆದ ಶಕ್ತಿ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತುಮಕೂರಿನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂದಿನ 50 ವರ್ಷದಲ್ಲಿ ಹೊಸ ಬೆಂಗಳೂರು ನಿರ್ಮಾಣದ ತಯಾರಿ ಮಾಡಬೇಕು. ಬೆಂಗಳೂರು ಬೆಳಸಲು ಬಂದಾಗ ರಾಮನಗರ, ಚನ್ನಪಟ್ಟಣ, ನೆಲಮಂಗಲ ಆದ ಮೇಲೆ ತುಮಕೂರನ್ನೇ ನೋಡಬೇಕು ಎಂದು ತಿಳಿಸಿದರು.

ಐದು ಗ್ಯಾರಂಟಿ ಕೊಟ್ಟು ಕೈ ಮುಷ್ಟಿ ಆಯ್ತು

ಬಸವರಾಜು ಅವರು ಹೋರಾಟ ಮಾಡಿ ಹೆಚ್ಎಎಲ್​ನ ತರೋದಕ್ಕೆ ಪ್ರಯತ್ನ ಮಾಡಿದ್ರು, ಅದನ್ನು ಮರೆಯೋದಕ್ಕೆ ಸಾಧ್ಯವಿಲ್ಲ. ಕೈಗಾರಿಕಾ ಪ್ರದೇಶವನ್ನ ಈ ಕಾರಿಡಾರ್ ಅನ್ನ ಈ ಸರ್ಕಾರದಲ್ಲಿ ಹೆಚ್ಚು ಒತ್ತುಕೊಡುತ್ತದೆ. ಐದು ಗ್ಯಾರಂಟಿ ಕೊಟ್ಟಿದ್ವಿ, ಐದು ಗ್ಯಾರಂಟಿ ಕೊಟ್ಟು ಕೈ ಮುಷ್ಟಿ ಆಯ್ತು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಇದು ಸಾಕ್ಷಿ ಆಯ್ತು ಎಂದು ಹೇಳಿದರು.

ಅನ್ನಭಾಗ್ಯ ಸಿದ್ದರಾಮಯ್ಯ ಕನಸಿನ ಭಾಗ್ಯ

ಅನ್ನಭಾಗ್ಯ ಸಿದ್ದರಾಮಯ್ಯ ಕನಸಿನ ಭಾಗ್ಯ. ಈ ಗ್ಯಾರಂಟಿಗಳಿಂದ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಿ ಅರ್ಥಿಕವಾಗಿ ಶಕ್ತಿ ತುಂಬುವ ಕೆಲಸವಾಗಿದೆ. ನಾವು ಗ್ಯಾರಂಟಿಗಳ ಬಗ್ಗೆ ಆಲೋಚನೆ ಮಾಡ್ತಾ ಇಲ್ಲ. ನಿಮ್ಮ ಬದುಕು ಅಸನು ಮಾಡೋ ಬಗ್ಗೆ ಅಲೋಚನೆ ಮಾಡ್ತೀವಿ. ಜನರಿಗೆ ಸರ್ಕಾರ ಕಾರ್ಯಕ್ರಮ ಅರ್ಪಿಸಬೇಕು. ಸಾವಿರಾರು ಕೋಟಿ ರೂಪಾಯಿಯ ತುಮಕೂರು ಜಿಲ್ಲೆಯ ಋಣ ತೀರಿಸೋದಕ್ಕೆ ಹೊರಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Exit mobile version