Site icon PowerTV

ಜನಾರ್ದನ ರೆಡ್ಡಿ ಒರಿಜನಲ್‌ ಬಿಜೆಪಿ, ಅವರು ಬರಬಹುದು : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಶಾಸಕ ಗಾಲಿ ಜನಾರ್ದನ ರೆಡ್ಡಿ‌ ಕೂಡಾ ಓರಿಜನಲ್ ಬಿಜೆಪಿ, ಅವರು ಬರಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಜಗದೀಶ್ ಶೆಟ್ಟರ್ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಕ್ಕಿದ್ರು. ವೆಲಕಮ್ ಬ್ಯಾಕ್ ಅಂತ ಹೇಳಿದ್ದೇನೆ ಎಂದು ತಿಳಿಸಿದರು.

ಸರ್ಕಾರ ಐದು ವರ್ಷ ನಡೆಸಬೇಕು. ಆದ್ರೆ, ಅವರು ಐದು ವರ್ಷ ಸರ್ಕಾರ ಸರಿಯಾಗಿ ನಡೆಸ್ತಿಲ್ಲ ಅನ್ನೋ ಆಕ್ರೋಶ ಇದೆ. ಜನರಿಗೂ ಆಕ್ರೋಶ ಇದೆ, ನಮಗೂ ಅವಕಾಶ ಇದೆ ಎಂದು ಹೇಳಿದರು.

ಅವರೇ ರೀ ಅವರನ್ನ ಬಿಟ್ಟು ಯಾರು..?

ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರ ಕುರಿತು ಮಾತನಾಡಿ, ಜೋಶಿ ಬಿಟ್ರೆ ಮತ್ತಿನ್ನೇನು ಅನ್ನೋ ಮೂಲಕ ನಾನೇ ಅಭ್ಯರ್ಥಿ ಎಂದರು. ಟಿಕೆಟ್ ವಿಚಾರವಾಗಿ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ ಸ್ಪರ್ಧೆ ಕೇಳಿದ್ರೆ, ಅವರೇ ರೀ ಅವರನ್ನ ಬಿಟ್ಟು ಯಾರು..? ಯಾವ ಚರ್ಚೆ ಇಲ್ಲ ಸಾಹೇಬರೇ ಅಭ್ಯರ್ಥಿ ಎಂದು ಶಾಸಕ ಅರವಿಂದ್ ಬೆಲ್ಲದ್ ಸ್ಪಷ್ಟಪಡಿಸಿದರು.

ಧಾರವಾಡ ಲೋಕಸಭೆಗೆ ನಾನೇ ಅಭ್ಯರ್ಥಿ

ನಮ್ಮ ಪಕ್ಷ ಈಗಾಗಲೇ ಚುನಾವಣೆಗೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನು ಏನೂ ಮಾತನಾಡಲ್ಲ. ಆದ್ರೆ, ನಾನು ಚುನಾವಣೆಗೆ ತಯಾರಿ ನಡೆಸಿದ್ದೇನೆ. ಧಾರವಾಡ ಲೋಕಸಭೆ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಪ್ರಲ್ಹಾದ್ ಜೋಶಿ ಖಚಿತಪಡಿಸಿದರು.

Exit mobile version