Site icon PowerTV

I.N.D.I.Aಗೆ ನೀತಿ, ನಿಯತ್ತು, ನೇತೃತ್ವ ಮೂರು ಇಲ್ಲ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : I.N.D.I.A ಒಕ್ಕೂಟದಿಂದ ಒಂದೊಂದೆ ಪಕ್ಷಗಳು ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, I.N.D.I.A ಕೂಟಕ್ಕೆ ನೀತಿ, ನಿಯತ್ತು ಹಾಗೂ ನೇತೃತ್ವ ಈ ಮೂರು ಇಲ್ಲ ಎಂದು ಕುಹಕವಾಡಿದ್ದಾರೆ.

ಪಂಜಾಬ್​ನಲ್ಲಿ ಎಎಪಿ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿದೆ. ಪಶ್ಚಿಮ ಬಂಗಾಳದಲ್ಲಿಯೂ ಮಮತಾ ಬ್ಯಾನರ್ಜಿ ಸೀಟು ಹೊಂದಾಣಿಕೆಯಿಂದ ಹಿಂದೆ ಸರಿಸಿದ್ದಾರೆ. ಇದೀಗ, ಬಿಹಾರದಲ್ಲಿ ನಿತೀಶ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ. ಇದರಿಂದ I.N.D.I.A ಒಕ್ಕೂಟಕ್ಕೆ ಅರ್ಥವೇ ಇಲ್ಲ ಎಂದು ಕುಟುಕಿದ್ದಾರೆ.

ಭ್ರಷ್ಟಾಚಾರದಿಂದ ಬಂದ ಹಣದಿಂದಲೇ ಜೀವನ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅರವಿಂದ್ ಕೇಜ್ರಿವಾಲ್ ಅವರಿಗೆ ನಾಚಿಕೆ ಆಗಬೇಕು. ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ. ಇವತ್ತು ಭ್ರಷ್ಟಾಚಾರದಿಂದ ಬಂದ ಹಣದಿಂದಲೇ ಜೀವನ ನಡೆಸುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

Exit mobile version