Site icon PowerTV

ನಮ್ಮ ಕಾಂಗ್ರೆಸ್ ಪಾರ್ಟಿ ಸಮುದ್ರ : ಬೈರತಿ ಸುರೇಶ್

ಚಾಮರಾಜನಗರ : ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಕೆಲ ಶಾಸಕರ ಅಸಮಾಧಾನಗೊಂಡಿರುವ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರುಮ, ನಮ್ಮ ಕಾಂಗ್ರೆಸ್ ಪಾರ್ಟಿ ಸಮುದ್ರ. ದದ್ದಲ್ ಆಗಲಿ, ಯಾರೇ ಆಗಲಿ ಸ್ನೇಹಿತರೇ. ಕುಳಿತುಕೊಂಡು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಲಕ್ಷ್ಮಣ ಸವದಿಗೆ ಬಿಜೆಪಿಯಿಂದ ಒತ್ತಡವಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಈ ರೀತಿ ಹೇಳುತ್ತಲೇ ಬರುತ್ತಿದ್ದಾರೆ. ಸರ್ಕಾರ ಒಂದು ತಿಂಗಳಲ್ಲಿ ಬೀಳುತ್ತೆ, ನಾಲ್ಕು ತಿಂಗಳಲ್ಲಿ ಬೀಳುತ್ತೆ ಅಂತ ಹೇಳುತ್ತಿದ್ದರು. ಈಗ 9 ತಿಂಗಳಾಗಿದೆ, ಸರ್ಕಾರಕ್ಕೆ ಏನಾದ್ರು ಆಯ್ತಾ..? ಏನು ಆಗಿಲ್ಲ ಎಂದು ತಿಳಿಸಿದ್ದಾರೆ.

ಶೆಟ್ಟರ್ ಎಂಎಲ್​ಸಿ, ಎಂಎಲ್ಎ ಹೋಗಬೇಕಲ್ವಾ..?

ನಾವು ಸರ್ಕಾರ ರಚನೆ ಮಾಡಿರುವುದು ಎಂಎಲ್​ಎಗಳ ಮೇಲೆ. ನಮ್ಮ ಸರ್ಕಾರ ಸುಭದ್ರವಾಗಿರುತ್ತೆ. ಜಗದೀಶ್ ಶೆಟ್ಟರ್ ಅವರು ಎಂಎಲ್​ಸಿ. ಆದ್ರೆ, ಎಂಎಲ್ಎ ಹೋಗಬೇಕಲ್ವಾ..? ಎನ್ನುವ ಮೂಲಕ ಸವದಿ ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದಾರೆ.

ಯಾವ ಉದ್ದೇಶ ಇಟ್ಟುಕೊಂಡು ಹೇಳಿದ್ದಾರೋ..?

ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಪರ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬ್ಯಾಟ್ ಬೀಸಿದ ವಿಚಾರವಾಗಿ ಮಾತನಾಡಿ, ಇದನ್ನ ಯಾವ ಉದ್ದೇಶ ಇಟ್ಟುಕೊಂಡು ಹೇಳಿದ್ದಾರೆಯೋ? ಎಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

Exit mobile version