Site icon PowerTV

ಕರ್ನಾಟಕದ 9 ಸಾಧಕರಿಗೆ ಸೇರಿ ಒಟ್ಟು 132 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

ದೆಹಲಿ: ಗಣರಾಜ್ಯೋತ್ಸವದ ಮುನ್ನಾ ದಿನ ರಾಷ್ಟ್ರಪತಿಗಳು 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಸೇರಿದಂತೆ ಒಟ್ಟು 132 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ನಟ ಹಾಗೂ ರಾಜಕಾರಣಿ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕದ ಜೇನು ಕುರುಬ ಸಮುದಾಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಮೈಸೂರಿನ ಸೋಮಣ್ಣ, ಪ್ಲಾಸ್ಟಿಕ್ ಸರ್ಜನ್ ಪ್ರೇಮ್ ಧನರಾಜ್ ಅವರಿಗೆ 2024ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ ಕಾಸರಗೋಡಿನ ಭತ್ತ ಬೆಳೆಯುವ ರೈತ ಸತ್ಯ ನಾರಾಯಣ ಬೇಳೇರಿ ಅವರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಇಂದು 75ನೇ ಗಣರಾಜ್ಯೋತ್ಸವ ಸಂಭ್ರಮ

ಪ್ರತಿ ವರ್ಷ ಜನವರಿ 26ರಂದು ಭಾರತವು ಅತ್ಯಂತ ಸಡಗರದಿಂದ ಗಣರಾಜ್ಯೋತ್ಸವನ್ನು ಆಚರಿಸುತ್ತದೆ. ಇದೇ ವೇಳೆ, ರಾಷ್ಟ್ರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರನ್ನು ಗುರುತಿಸಿ ಅವರಿಗೆ ನಾಗರಿಕ ಪ್ರಶಸ್ತಿಗಳನ್ನು ಕೂಡ ಘೋಷಣೆ ಮಾಡಲಾಗುತ್ತದೆ. ಇದರ ಜತೆಗೆ, ಶೌರ್ಯ, ಸಾಹಸ ಪ್ರದರ್ಶಿಸಿದ ಸೇನಾ ಯೋಧರು, ಅಧಿಕಾರಿಗಳು ಮತ್ತು ಪೊಲೀಸರಿಗೂ ಕ್ರಮವಾಗಿ ಸೇನಾ ಹಾಗೂ ಪೊಲೀಸ್ ಪದಕ, ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.

ಇತ್ತೀಚೆಗೆ ಕಾಶ್ಮೀರದ ರಜೌರಿಯಲ್ಲಿ ಹುತಾತ್ಮರಾದ ಕರುನಾಡಿನ ವೀರಯೋಧ ಪ್ರಾಂಜಲ್‌ಗೆ ಮರಣೋತ್ತರವಾಗಿ ಶೌರ್ಯ ಚಕ್ರ ನೀಡಲಾಗಿದೆ. 6 ಮಂದಿಗೆ ಕೀರ್ತಿ ಚಕ್ರ (ಮೂವರು ಮರಣೋತ್ತರ) ನೀಡಲಾಗಿದೆ.

ಪದ್ಮವಿಭೂಷಣ ಪ್ರಶಸ್ತಿ

  1. ವೈಜಯಂತಿ ಬಾಲಿ (ಕಲೆ)-ತಮಿಳುನಾಡು
  2. ಕೆ.ಚಿರಂಜೀವಿ (ಕಲೆ)-ಆಂಧ್ರಪ್ರದೇಶ
  3. ಎಂ.ವೆಂಕಯ್ಯ ನಾಯ್ಡು (ಸಾರ್ವಜನಿಕ ಸೇವೆ)-ಆಂಧ್ರ ಪ್ರದೇಶ
  4. (ಮರಣೋತ್ತರ) ಬಿಂದೇಶ್ವರ ಪಾಠಕ್‌ (ಸೋಶಿಯಲ್‌ ವರ್ಕ್‌)-ಬಿಹಾರ
  5. ಪದ್ಮ ಸುಬ್ರಹ್ಮಣ್ಯಂ(ಕಲೆ)-ತಮಿಳುನಾಡು

ಪದ್ಮಭೂಷಣ ಪ್ರಶಸ್ತಿ

  1. ಎಂ ಫಾತಿಮಾ ಬೀವಿ(ಮರಣೋತ್ತರ) – ಸಾರ್ವಜನಿಕ ಸೇವೆ (ಕೇರಳ)
  2. ಹೊರ್‌ಮುಸ್‌ಜೀ ಎನ್‌ ಕಾಮಾ – ಶಿಕ್ಷಣ, ಪತ್ರಿಕೋದ್ಯಮ (ಮಹಾರಾಷ್ಟ್ರ)
  3. ಮಿಥುನ್‌ ಚಕ್ರವರ್ತಿ – ನಟ (ಪಶ್ಚಿಮ ಬಂಗಾಳ)
  4. ಸೀತಾರಾಂ ಜಿಂದಾಲ್‌ – ಉದ್ಯಮಿ (ಕರ್ನಾಟಕ)
  5. ಯಂಗ್‌ ಲಿಯು – ಉದ್ಯಮಿ (ತೈವಾನ್‌)
  6. ಅಶ್ವಿನ್‌ ಬಾಲಚಂದ್‌ ಮೆಹ್ತಾ – ವೈದ್ಯ (ಮಹಾರಾಷ್ಟ್ರ)
  7. ಸತ್ಯವ್ರತ ಮುಖರ್ಜಿ – ಸಾರ್ವಜನಿಕ ಸೇವೆ (ಪಶ್ಚಿಮ ಬಂಗಾಳ)
  8. ರಾಮ್‌ ನಾಯಕ್‌ – ಸಾರ್ವಜನಿಕ ಸೇವೆ (ಮಹಾರಾಷ್ಟ್ರ)
  9. ತೇಜಸ್‌ ಎಂ ಪಟೇಲ್‌ – ವೈದ್ಯಕೀಯ (ಗುಜರಾತ್‌)
  10. ಒಲಂಚೆರಿ ರಾಜಗೋಪಾಲ – ಸಾರ್ವಜನಿಕ ಸೇವೆ (ಕೇರಳ)
  11. ದತ್ತಾತ್ರೇಯ ಅಂಬಾದಾಸ್‌ ಮಾಯಾಲೂ – ಕಲೆ (ಮಹಾರಾಷ್ಟ್ರ)
  12. ತೊಗ್ದಾನ್‌ ರಿನ್‌ಪೊಚೆ (ಮರಣೋತ್ತರ) – ಧಾರ್ಮಿಕ (ಲಡಾಕ್‌)
  13. ಪ್ಯಾರೆಲಾಲ್‌ ಶರ್ಮಾ – ಕಲೆ (ಮಹಾರಾಷ್ಟ್ರ)
  14. ಚಂದ್ರೇಶ್ವರ ಪ್ರಸಾದ್‌ ಠಾಕೂರ್‌ – ವೈದ್ಯಕೀಯ (ಬಿಹಾರ)
  15. ಉಷಾ ಉತುಪ್‌ – ಗಾಯಕಿ (ಪಶ್ಚಿಮ ಬಂಗಾಳ)
  16. ವಿಜಯಕಾಂತ್‌ (ಮರಣೋತ್ತರ)- ನಟ (ತಮಿಳುನಾಡು)
  17. ಕುಂದನ್‌ ವ್ಯಾಸ್‌ – ಶಿಕ್ಷಣ, ಪತ್ರಿಕೋದ್ಯಮ (ಮಹಾರಾಷ್ಟ್ರ)

ಭಾರತದ 75 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು, ಸರ್ಕಾರವು ಈ ಪ್ರಶಸ್ತಿ ವಿಜೇತರ ಹೆಸರು ಪ್ರಕಟಿಸುತ್ತದೆ. ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ – ಪದ್ಮಭೂಷಣ, ಪದ್ಮ ವಿಭೂಷಣ ಮತ್ತು ಪದ್ಮಶ್ರೀ. ಪದ್ಮವಿಭೂಷಣ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಪದ್ಮಭೂಷಣವು ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪುರಸ್ಕೃತರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Exit mobile version