Site icon PowerTV

ಸಿದ್ದರಾಮಯ್ಯ ಇಂಟಲಿಜೆನ್ಸಿ ಫೇಲ್‌ ಆಗಿದೆ: ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ಜಗದೀಶ್  ಶೆಟ್ಟರ್ ಬಿಜೆಪಿ ಸೇರಿರೋದು ಸಿಎಂ ಸಿದ್ದರಾಮಯ್ಯನವರ ಇಂಟಲಿಜೆನ್ಸಿ ಫೇಲ್​  ಆಗಿದೆ ಅಂತ ಗಾಬರಿಯಾಗಿದ್ದಾರೆ ಎಂದು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಭ್ರಮೆಯಲ್ಲಿ ತೇಲುತ್ತಿದ್ದರು. ಈಗ ಅವರಿಗೆ ವಾಸ್ತವಿಕತೆ ಅರ್ಥ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ಇನ್ನೂ ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದಾಗ ಕಾಂಗ್ರೆಸ್​​​ನವರ ಸ್ಥಿತಿ ಅರ್ಥ ಆಗುತ್ತಿದೆ. ಶೆಟ್ಟರ್ ಅವರು ಬಿಜೆಪಿ ಸೇರುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇಂಟಲಿಜೆನ್ಸಿ ಫೇಲ್‌ ಆಗಿದೆ ಅಂತ ಗಾಬರಿಯಾಗಿದ್ದಾರೆ. ಆ ಪಕ್ಷದ ಹಿರಿಯ ಮುಖಂಡರು ಕಕ್ಕಾ ಬಿಕ್ಕಿಯಾಗಿದ್ದಾರೆ. ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಪಕ್ಷದ ಮುಖಂಡರು ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಲು ಎಲ್ಲರೂ ಬಯಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಶೆಟ್ಟರ್‌ಗೆ IT, ED ಭಯ ತೋರಿಸಿರಬಹುದು: ಪ್ರಿಯಾಂಕ್ ಖರ್ಗೆ

ನಮ್ಮ ಬಿಜೆಪಿ ಪಕ್ಷ ಯಾವುದೇ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ. ಆದರೆ, ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ‘ವೀರಶೈವ ಲಿಂಗಾಯತ’ ವಿಚಾರವಾಗಿ ಬೆಂಕಿ ಹಚ್ಚಿದರು. ಈಗ ಬೇರೆ ಬೇರೆ ಜಾತಿಯವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

Exit mobile version