Site icon PowerTV

ಟಿಎಂಸಿ ಮತ್ತು ಎಎಪಿ ಬಳಿಕ ರಾಹುಲ್ ಯಾತ್ರೆಯಿಂದ ನಿತೀಶ್ ದೂರ!

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಜನವರಿ 29ರಂದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಬಿಹಾರಕ್ಕೆ ಎಂಟ್ರಿ ಆಗಲಿದೆ. ಈಗಾಗಲೇ ಬಿಹಾರ ಸಿಎಂಗೆ ಯಾತ್ರೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಆಹ್ವಾನಿಸಿತ್ತು. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿಯಾಗಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕರ್ನಾಟಕದ 9 ಸಾಧಕರಿಗೆ ಸೇರಿ ಒಟ್ಟು 132 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

ಇಂಡಿಯಾ ಒಕ್ಕೂಟದಿಂದ ಟಿಎಂಸಿ ಮತ್ತು ಎಎಪಿ ಹೊರ ಬಂದು ಕಾಂಗ್ರೆಸ್ ಶಾಕ್ ನೀಡಿದ್ದ ಬೆನ್ನಲ್ಲೆ ನಿತೀಶ್ ಕುಮಾರ್ ಕೂಡ ಶಾಕ್ ನೀಡಿದ್ದಾರೆ.

Exit mobile version