Site icon PowerTV

ಸಿದ್ಧಾಂತಕ್ಕೆ ಬದ್ಧರಾದವರು ಬೇರೆ ಪಕ್ಷಕ್ಕೆ ಒಗ್ಗಲ್ಲ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಆಗಮನದಿಂದ ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ನಮ್ಮ ವಿಶ್ವಾಸ ಹೆಚ್ಚಾಗಿದೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳುವ ನಿರೀಕ್ಷೆ ಇತ್ತು.ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ನಮ್ಮಪ್ಪ ಶಿಸ್ತಿನ ಸಿಪಾಯಿ ಆಗಿ ಬಿಜೆಪಿ ಸೇರಿದ್ದಾರೆ : ಪುತ್ರ ಸಂಕಲ್ಪ್ ಶೆಟ್ಟರ್  
 
ಶೆಟ್ಟರ್ ಸುದೀರ್ಘ ರಾಜಕೀಯ ಅನುಭವಿ ಅವರು ಜನಸಂಘ ಕಾಲದಿಂದ ಬಿಜೆಪಿ ಕಟ್ಟಿದವರು. ಅವರು ಪಕ್ಷಕ್ಕೆ ಮರಳಿರುವುದು ಸಂತೋಷದನ ವಿಷಯವಾಗಿದೆ.ಅವರು ಬಿಜೆಪಿಯ ಪರಮೋಚ್ಚ ನಾಯಕರನ್ನು ಎಂದೂ ಟೀಕಿಸಿಲ್ಲ. ಆರೋಗ್ಯಕರ ಟೀಕೆಗಳನ್ನು ಮಾತ್ರ ಮಾಡುತ್ತಿದ್ದರು. ಶೆಟ್ಟರ್ ಬಿಜೆಪಿಗೆ ಮರಳಿದ ಕ್ರೆಡಿಟ್ ಪಕ್ಷಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ, ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‍ಗೆ ಸೇರಿದ್ದರು. ಇದೀಗ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Exit mobile version