Site icon PowerTV

ವಿತ್ ಔಟ್ ಪಾರ್ಟಿ, ಸಿಂಬಲ್ ಗೆದ್ದು ಬಂದಿದ್ದೇನೆ : ಸುಮಲತಾ ಗುಡುಗು

ಬೆಂಗಳೂರು : ನಾನು ವಿತ್ ಔಟ್ ಪಾರ್ಟಿ, ಸಿಂಬಲ್ ಗೆದ್ದು ಬಂದಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ಪಷ್ಟವಾಗಿ ಹೇಳ್ತಿನಿ.. ಖಂಡಿತ ನನಗೆ ಬಿಜೆಪಿ ಸೀಟು ಕೊಡ್ತಾರೆ ಎಂಬ ನಂಬಿಕೆ ಇದೆ. ಕೆಲಸ ಹಾಗೂ ಗೌರವ ಉಳಿಸಿಕೊಂಡಿದ್ದೇವೆ, ಅದನ್ನ ಗುರುತಿಸ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂಬರೀಶ್ ಅವರು ದಾಖಲೆಯಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ನಾನು ವಿತ್ ಔಟ್ ಪಾರ್ಟಿ, ಸಿಂಬಲ್ ಗೆದ್ದು ಬಂದಿದ್ದೇನೆ. ನಾನು ಮಂಡ್ಯದಲ್ಲಿ ನಿಲ್ಲಬೇಕು, ಬೇರೆ ಕಡೆ ನಿಲ್ಲುವ ಅನಿವಾರ್ಯ ಇಲ್ಲ. ಅಂಬರೀಶ್ ಅವರು ಹೋಗ್ತಾ ನನಗು ಜವಾಬ್ದಾರಿ ಬಿಟ್ಟುಹೋಗಿದ್ದಾರೆ. ಅಂಬರೀಶ್ ಕನಸನ್ನು ನಾನು ಪೂರೈಸಬೇಕು. ಅದಕ್ಕೆ‌ ಮಂಡ್ಯ ಜನ ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮಂಡ್ಯದಲ್ಲಿ ಉಳಿಯಬೇಕು

ಎರಡು ದಿನದ ಹಿಂದೆನೇ ಎಲ್ಲಾ ಬಿಜೆಪಿ ಸ್ಥಳೀಯ ನಾಯಕರು ಬಂದಿದ್ದರು. ಮುಂದೆ ಬಿಜೆಪಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆಯಾಗಿದೆ. ಮೈತ್ರಿಯಾಗಿದ್ರೂ ಸಿಟ್ಟಿಂಗ್ ಎಂಪಿಗೆ ಟಿಕೆಟ್ ಕೊಡುವ ಪದ್ದತಿಯಿದೆ. ಅವರು ಗೆದ್ದಿರೋ ಕ್ಷೇತ್ರದಲ್ಲೂ ಅಷ್ಟೇ, ಹೀಗಾಗಿ ಬಿಜೆಪಿ ಮಂಡ್ಯದಲ್ಲಿ ಉಳಿಯಬೇಕು. ಎಂಪಿ ಸೀಟು ಉಳಿಸಿಕೊಂಡರೇ ಗೆದ್ದೆ ಗೆಲ್ಲುತ್ತೇವೆ ಎಂದು ಸುಮಲತಾ ಅಂಬರೀಶ್ ಹೇಳಿದರು.

Exit mobile version