Site icon PowerTV

ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ್ದು ಖುಷಿಯಾಗಿದೆ : ಸಚಿವ ಸಂತೋಷ ಲಾಡ್‌

ಧಾರವಾಡ: ಜಗದೀಶ್ ಶೆಟ್ಟರ್ ಅವರು ಬಿಜೆಪಿ ಸೇರಿದ್ದು ವೈಯಕ್ತಿಕವಾಗಿ ಬಹಳ ಖುಷಿಯಾಗಿದೆ.ಎಂದು ಸಚಿವ ಸಂತೋಷ್ ಲಾಡ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಗದೀಶ ಶೆಟ್ಟರ್ ಯಾಕೆ ಕಾಂಗ್ರೆಸ್‌ಗೆ ಬಂದರು, ಬಿಜೆಪಿಗೆ ಯಾಕೆ ವಾಪಸ್ ಹೋದರು ಎಂದು ಅವರನ್ನೇ ಕೇಳಬೇಕು’ ಎಂದರು.

ಅವರು ಬಿಜೆಪಿ ತೊರೆದಾಗ ಏನೋ ಹೇಳಿದ್ದರು, ಈಗ ವಾಪಸ್ ಹೋಗುವಾಗ ಏನು ಹೇಳುತ್ತಾರೆ. ರಾಜಕಾರಣದಲಿ ಇದೆಲ್ಲ ಸಾಮಾನ್ಯ.ಕಾಂಗ್ರೆಸ್ ಅವರಿಗೆ ಗೌರವ ನೀಡಿ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಪಕ್ಷದ ಎಲ್ಲ ಸಭೆಗಳಲ್ಲಿ ಹಿರಿಯರ ಜೊತೆ ಕುಳಿತುಕೊಳ್ಳುವ ಅವಕಾಶ ನೀಡಲಾಗಿತ್ತು. ಅವರು ಈಗ ದಿಢೀರಾಗಿ ಬಿಜೆಪಿಗೆ ವಾಪಸಾಗಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

‘ಜಗದೀಶ ಶೆಟ್ಟರ ಅವರು ಬಿಜೆಪಿ ಸೇರುತ್ತಾರೆ ಅಂಥಾ ‘ಹೊಗೆ’ ಇತ್ತು. ಅವರು ಪಕ್ಷ ತೊರೆದಿರುವುದರಿಂದ ಕಾಂಗ್ರೆಸ್‌ಗೆ ನಷ್ಟ ಇಲ್ಲ. ಕಾಂಗ್ರೆಸ್ ಬಾಗಿಲು ಇಲ್ಲದ ಪಕ್ಷ, ಸಿಟಿ ಬಸ್ ಇದ್ದಂತೆ ಯಾರು ಬೇಕಾದರೂ ಹತ್ತಬಹುದು, ಎಲ್ಲಿಗೆ ಬೇಕಾದರೂ ಹೋಗಬಹುದು’ ಎಂದು ಉತ್ತರಿಸಿದರು.

‘ಮುಂದಿನ ದಿನಗಳಲ್ಲಿ ಕೆಲವು ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಕಾಲ ಬಂದಾಗ ಯಾರು ಸೇರಲಿದ್ದಾರೆ ಎಂಬುದು ಹೇಳುತ್ತೇವೆ’ ಎಂದರು.

Exit mobile version