Site icon PowerTV

Good News : ಪೆಟ್ರೋಲ್ 11 ರೂ., ಡೀಸೆಲ್ 6 ರೂ. ಬೆಲೆ ಇಳಿಕೆ?

ಬೆಂಗಳೂರು : ವಾಹನ ಸವಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿ ನೀಡಲು ಮುಂದಾಗಿವೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ ಸಾಧ್ಯತೆಯಿದೆ.

ಫೆಬ್ರವರಿ 1ರಿಂದ ಪೆಟ್ರೋಲ್ ದರದಲ್ಲಿ 11 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 6 ರೂಪಾಯಿ ಇಳಿಸಲು ತೈಲ ಕಂಪನಿಗಳು ಯೋಚಿಸುತ್ತಿವೆ ಎಂದು ವರದಿಯಾಗಿದೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳಾದ ಐಒಸಿ, ಎಚ್​ಪಿಸಿಎಲ್, ಬಿಪಿಸಿಎಲ್​ಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಮುಂದಿನ ವಾರದಿಂದ ಇಳಿಸಬಹುದು ಎಂದು ಹೇಳಲಾಗುತ್ತಿದೆ. ಈ ವೇಳೆಗೆ ಕಚ್ಚಾ ತೈಲ ಬೆಲೆ 80 ಡಾಲರ್​ಗಿಂದ ಕಡಿಮೆ ಮಾರಾಟವಾಗಲಿದೆ. ಇದರಿಂದ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುವುದು ಖಂಡಿತ ಎಂದು ವರದಿಯಾಗಿದೆ.

ಇಂದಿನ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ 101.94 ರೂ. ಆಗಿದ್ದರೆ, ಡೀಸೆಲ್ ದರ 87.89 ರೂ. ಇದೆ. ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 96.72 ರೂ., ಡೀಸೆಲ್ ದರ 89.62 ರೂ. ಆಗಿದೆ. ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಪೆಟ್ರೋಲ್ ದರಗಳು ಕ್ರಮವಾಗಿ 102.63 ರೂ., 106.31 ರೂ., 106.03 ರೂ. ಇದೆ. ಡೀಸೆಲ್ ದರ ಕ್ರಮವಾಗಿ 94.24 ರೂ., 94.27 ರೂ., 92.76 ರೂ. ಇದೆ.

Exit mobile version