Site icon PowerTV

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪತಿ ಎದುರಿಗೆ ಪತ್ನಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಲ್ಲಿ ವರದಕ್ಷಿಣೆ ಕಾಟಕ್ಕೆ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ರಂಜಿತಾ (29) ಮೃತ ದುರ್ದೈವಿ. ದೊಡ್ಡ ಬಸ್ತಿ ರಸ್ತೆ ಬಳಿಯ ಬಸವೇಶ್ವರನಗರದ ಮನೆಯಲ್ಲಿ ಘಟನೆ ನಡೆದಿದೆ.

ರಂಜಿತಾ ಮಧು ಎಂಬುವವರ ಜತೆ ವಿವಾಹವಾಗಿದ್ದರು. ಮೊದಮೊದಲು ಇವರಿಬ್ಬರು ಅನ್ಯೋನ್ಯವಾಗಿದ್ದರು. ಆದರೆ ದಿನ ಕಳೆದಂತೆ ಪತಿ ಮಧು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ಜತೆಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ಪೋಷಕರೊಟ್ಟಿಗೆ ಆಗಾಗ ರಂಜಿತಾ ಹೇಳಿಕೊಳ್ಳುತ್ತಿದ್ದಳು.

ಇದನ್ನೂ ಓದಿ: ರಾಮನ ದರ್ಶನಕ್ಕೆ ಭಕ್ತರ ನೂಕುನುಗ್ಗಲು: ದೇವಾಲಯದ ಬಾಗಿಲು ತಾತ್ಕಾಲಿಕ ಬಂದ್!

ಪತಿ ಮಧು ಮನೆಯಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ಆತನೇ ಹತ್ಯೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ರಂಜಿತಾ ಇಎಸ್‌ಎಸ್ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು.ಸದ್ಯ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

 

 

 

 

Exit mobile version