Site icon PowerTV

ಬಾಲರಾಮನಿಗೆ ‘ಚಾಮರ ಸೇವೆ’ : ಮುಂದಿನ 48 ದಿನ ಪೇಜಾವರ ಶ್ರೀಗಳಿಂದಲೇ ಪೂಜೆ

ಬೆಂಗಳೂರು : ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ‌ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ಇಂದಿನಿಂದ 48 ದಿನಗಳ ಮಂಡಲೋತ್ಸವ ಆರಂಭಗೊಂಡಿದೆ.

ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ, ಮಹಾಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು.

ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ, ವಿಷ್ಣುಮೂರ್ತಿ ಆಚಾರ್ಯ , ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಸದವರ ನೇತೃತ್ವದಲ್ಲಿ ವಿವಿಧ ಹೋಮಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿದವು.

ಬಾಲರಾಮನಿಗೆ 16 ನಮೂನೆಗಳ ಪೂಜೆ

ಬಾಲರಾಮನಿಗೆ ಒಟ್ಟು 16 ನಮೂನೆಗಳ ಪೂಜೆ ನಡೆಯಬೇಕು. ಇದರಲ್ಲಿ ಗೌರವಾರ್ಥವಾಗಿ ಪೇಜಾವರ ಮಠದ ಶ್ರೀಗಳು, ಅಯೋಧ್ಯೆಯ ಬಾಲರಾಮನಿಗೆ ಚಾಮರಸೇವೆ ಸಲ್ಲಿಸಿದರು. 48 ದಿನಗಳ ಕಾಲ ಪೇಜಾವರ ಶ್ರೀಗಳೇ ಅಯೋಧ್ಯೆಯ ಬಾಲರಾಮನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಿದ್ದಾರೆ. 2ನೇ ದಿನ ಪೇಜಾವರ ಶ್ರೀಗಳು ಬಾಲ ರಾಮನಿಗೆ ಪೂಜೆ ಸಲ್ಲಿಸಿದ ವಿಡಿಯೋ ಲಭ್ಯವಾಗಿವೆ.

Exit mobile version