Site icon PowerTV

ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್​ಗೆ ‘ಭಾರತ ರತ್ನ’ ಘೋಷಣೆ

ನವದೆಹಲಿ : ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ಪ್ರಶಸ್ತಿ ಘೋಷಣೆ ಮಾಡಿದೆ.

ಕರ್ಪೂರಿ ಠಾಕೂರ್ ಅವರು ಹಿಂದುಳಿದ ಜಾತಿಗಳಿಗಾಗಿ ಮಾಡಿರುವ ಕಾರ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಜನನಾಯಕ್ ಎಂದೇ ಪ್ರಖ್ಯಾತರಾಗಿದ್ದ ಠಾಕೂರ್ ಅವರು ಜನತಾ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದರು. ಡಿಸೆಂಬರ್ 1970 ರಿಂದ 6 ತಿಂಗಳು, ಡಿಸೆಂಬರ್ 1977 ರಿಂದ ಏಪ್ರಿಲ್ 1979 ರವರೆಗೆ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ರಾಷ್ಟ್ರಪತಿ ಮುರ್ಮು ಸಂತಸ

ವಿದ್ಯಾರ್ಥಿಯಾಗಿದ್ದಾಗಲೇ ಕರ್ಪೂರಿ ಠಾಕೂರ್ ಅವರು ಕ್ವಿಟ್ ಇಂಡಿಯಾ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ಜೈಲಿಗೂ ಹೋಗಿದ್ದರು. ಕರ್ಪೂರಿ ಠಾಕೂರ್ ಅವರಿಗೆ (ಮರಣೋತ್ತರ) ಭಾರತ ರತ್ನ ಪ್ರಶಸ್ತಿ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version