Site icon PowerTV

ರಾಮನ ದರ್ಶನಕ್ಕೆ ಭಕ್ತರ ನೂಕುನುಗ್ಗಲು: ದೇವಾಲಯದ ಬಾಗಿಲು ತಾತ್ಕಾಲಿಕ ಬಂದ್!

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಕಾರಣ, ನೂಕುನುಗ್ಗಲು ಉಂಟಾಗಿದ್ದು, ಮಂದಿರದ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಜ.22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದ್ದು ಈ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ರದ್ದಾ ಭಕ್ತಿಯಿಂದ ನೆರವೇರಿಸಿದ್ದಾರೆ. ದೇಶದ ಗಣ್ಯಾತಿ ಗಣ್ಯರಿಗೆ ಸೋಮವಾರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಸಾರ್ವಜನಿಕರಿಗೆ ರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುವ ಕಾರಣ ಜನ ಮುಗಿಬಿದ್ದಿದ್ದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ: ಜೈ ಶ್ರೀರಾಮ್ ಎಂದು ಶುಭಾಶಯ ತಿಳಿಸಿದ ಡೇವಿಡ್ ವಾರ್ನರ್

ಕೊರೆಯುವ ಚಳಿಯಲ್ಲೂ ತನ್ನ ದೇವರನ್ನು ನೋಡಬೇಕೆಂಬ ತವಕ ಅವರನ್ನು ಅಲ್ಲಿಗೆ ತಂದು ನಿಲ್ಲಿಸಿತ್ತು, ರಾತ್ರಿ ವೇಳೆಯೂ ದೇಗುಲದ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಜನರು ನಿರಂತರವಾಗಿ ಜೈ ಶ್ರೀ ರಾಮ್ ಮತ್ತು ಸಿಯಾವರ ರಾಮ್ ಚಂದ್ರ ಕೀ ಜೈ ಎಂದು ಘೋಷಣೆಗಳನ್ನು ಕೂಗುತ್ತಿದ್ದರು.

ದೇವಾಲಯವು ಭಕ್ತರಿಗೆ ಬೆಳಗ್ಗೆ 7.00 ಕ್ಕೆ ಬಾಗಿಲು ತೆರೆಯುತ್ತದೆ ಮತ್ತು 11.30 ರವರೆಗೆ ಪ್ರವೇಶಿಸಬಹುದಾಗಿದೆ. ಮಧ್ಯಾಹ್ನ 2 ರಿಂದ 7ರವರೆಗೆ ಪ್ರವೇಶಕ್ಕೆ ಅವಕಾಶವಿರಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ, ಜನದ ದಟ್ಟಣೆ ಹೆಚ್ಚಾಗಿರುವ ಕಾರಣ ತಾತ್ಕಾಲಿಕವಾಗಿ ದರ್ಶನ ಮೊಟಕುಗೊಳಿಸಲಾಗಿದೆ.

Exit mobile version